ಬಳ್ಳಾರಿ : ಬಳ್ಳಾರಿಯಲ್ಲಿ ಹಾಡ ಹಗಲೇ ವ್ಯಕ್ತಿಯ ಭೀಕರ ಕೊಲೆಯಾಗಿದ್ದು, ಬಳ್ಳಾರಿಯ ರಾಣಿತೋಟದ ಜುಮ್ಮಾ ಮಸೀದಿ ಮುಂಭಾಗದಲ್ಲಿ ಈ ಒಂದು ಹತ್ಯೆ ನಡೆದಿದೆ ಎನ್ನಲಾಗಿದೆ. ಕೊಲೆಯಾದ ವ್ಯಕ್ತಿಯನ್ನು ವೆಂಕಟೇಶ್ ಎಂದು ತಿಳಿದುಬಂದಿದ್ದು, ಹತ್ಯೆ ಕುರಿತು ಬಳ್ಳಾರಿ ಜನತೆ ಬೆಚ್ಚಿ ಬಿದ್ದಿದ್ದಾರೆ.
ಕೊಲೆಯಾದ ವೆಂಕಟೇಶ್ ಆರ್ ಜೆ ಕಾಟನ್ ಬಿಲ್ ಇಂಡಸ್ಟ್ರಿ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ಶವಾಗಾರದ ಮುಂದೆ ಮೃತನ ಸಂಬಂಧಿಕರು ಗೋಳಾಡುತ್ತಿದ್ದಾರೆ
ಬಳ್ಳಾರಿಯ ಕಣೇಕಲ್ ರಸ್ತೆಯ ರಾಣಿತೋಟದಲ್ಲಿ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.