ತುಮಕೂರು : ಇತ್ತೀಚಿಗೆ ವ್ಹಿಲಿಂಗ್ ಮಾಡುವ ಪುಂಡರ ಅಟ್ಟಹಾಸ ಮಿತಿಮೀರಿದು, ಇದೀಗ ತುಮಕೂರಿನಲ್ಲಿ ಘೋರವಾದ ಘಟನೆ ಸಂಭವಿಸಿದೆ. ವ್ಹಿಲಿಂಗ್ ಪುಂಡರ ಅಟ್ಟಹಾಸಕ್ಕೆ ಹಾಲು ತರಲು ಹೋಗಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ತುಮಕೂರಿನ ಟೂಡ ಕಚೇರಿ ಬಳಿ ಈ ಒಂದು ದುರ್ಘಟನೆ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಹೇಮಾದ್ರಿ ವಿದ್ಯಾಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ತಿಪ್ಪೇಸ್ವಾಮಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ತುಮಕೂರಿನ ಸತ್ಯಮಂಗಲದಲ್ಲಿ ಹೇಮಾದ್ರಿ ಸಂಸ್ಥೆ ಇದೆ. ಬೆಳಿಗ್ಗೆ ಹಾಲು ತರಲು ಮನೆಯಿಂದ ತಿಪ್ಪೇಸ್ವಾಮಿ ಹೊರಗಡೆ ಬಂದಿದ್ದರು. ಇವಳೇ ವೀಲಿಂಗ್ ಮಾಡುತ್ತಿದ್ದ ಪುಂಡರ ಬೈಕ್ ಡಿಕ್ಕಿಯಾಗಿತ್ತು.
ಬೈಕ್ ಡಿಕ್ಕಿಯಾಗಿ ತಿಪ್ಪೇಸ್ವಾಮಿ ಅವರ ತಲೆ ಮತ್ತು ಕಾಲಿಗೆ ಗಂಭೀರವಾಗಿ ಗಾಯಗಳಾಗಿತ್ತು. ತಿಪ್ಪೇಸ್ವಾಮಿಯನ್ನು ಕೂಡಲೇ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ತಿಪ್ಪೇಸ್ವಾಮಿ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.