ಬೆಂಗಳೂರು : ಬೆಂಗಳೂರಿನಲ್ಲಿ ನಿನ್ನೆ ಘೋರ ದುರಂತ ಒಂದು ಸಂಭವಿಸಿದ್ದು, ಬಿಬಿಎಂಪಿ ಪಾರ್ಕ್ ನಲ್ಲಿ ಮರ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಜಾಜಿನಗರದ ನವರಂಗ ಪಾರ್ಕ್ ಬಳಿ ಒಂದು ಘಟನೆ ನಡೆದಿದೆ.
ಪಾರ್ಕ್ ನಲ್ಲಿ ಮಲಗಿದ್ದ ವೇಳೆ ಮರ ಬಿದ್ದು ಲಕ್ಷ್ಮಣ್ (31) ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಮೃತ ಲಕ್ಷ್ಮಣ ಸಹೋದರ ಮೂರ್ತಿ ಈ ಒಂದು ಹೇಳಿಕೆ ನೀಡಿದ್ದಾರೆ. ನಿನ್ನೆ ಸಂಜೆ ಮನೆಯಲ್ಲಿ ಊಟ ಮಾಡಿ ಪಾರ್ಕ್ ಗೆ ಹೋಗಿದ್ದರು.ಪಾರ್ಕ್ ನಲ್ಲಿ ಮಲಗಿದ್ದ ವೇಳೆ ಲಕ್ಷ್ಮಣ್ ಮೇಲೆ ಮರ ಬಿದ್ದಿದೆ. ಆಗ ಸ್ಥಳೀಯರು ಕೂಡಲೇ ಲಕ್ಷ್ಮಣನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಾವು ಆಸ್ಪತ್ರೆಗೆ ಹೋದಾಗ ಸಹೋದರ ಲಕ್ಷ್ಮಣ ಮೃತಪಟ್ಟಿದ್ದ. ಮತ್ತು ಲಕ್ಷ್ಮಣ್ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು. ಎಂದು ಬೆಂಗಳೂರಿನಲ್ಲಿ ಮೃತ ಲಕ್ಷ್ಮಣ್ ಸಹೋದರ ಮೂರ್ತಿ ಆಗ್ರಹಿಸಿದ್ದಾರೆ. ಇದೀಗ ಸ್ಥಳೀಯರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.








