ಹುಬ್ಬಳ್ಳಿ : ಕಳೆದ ಹಲವು ದಿನಗಳ ಹಿಂದೆ ಬೆಂಗಳೂರಲ್ಲಿ ಟೆಕ್ಕಿ ಅತುಲ್ ಸುಭಾಷ್ ಪತ್ನಿಯ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಒಂದು ಘಟನೆಗೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿತ್ತು. ಇದೀಗ ಹುಬ್ಬಳ್ಳಿಯಲ್ಲಿ ಕೂಡ ಅಂತಹದ್ದೇ ಘಟನೆ ನಡೆದಿದ್ದು ಪೀಟರ್ ಎನ್ನುವ ವ್ಯಕ್ತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಹೌದು ಹೆಂಡತಿಯ ಕಿರುಕುಳ ತಾಳಲಾರದೆ ಪತಿ ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ನಡೆದಿದೆ. ಡೆತ್‌ನೋಟ್ ಬರೆದಿಟ್ಟು ಪೀಟರ್ ಎನ್ನುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಪೀಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಡೆತ್ ನೋಟ್ ನಲ್ಲಿ ನನ್ನನ್ನು ಕ್ಷಮಿಸಿ ನನ್ನ ಹೆಂಡತಿ ನನ್ನ ಸಾವನ್ನು ಬಯಸುತ್ತಿದ್ದಾಳೆ ಎಂದು ತಂದೆಯ ಹೆಸರನ್ನು ಉಲ್ಲೇಖಿಸಿ ಡೆತ್ ನೋಟ್ ಬರೆದಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡತಿದ್ದ ಪೀಟರ್ ಹಾಗೂ ಆತನ ಪತ್ನಿ ಪಿಂಕಿ ನಡುವೆ ಕಳೆದ ಕೆಲವು ದಿನಗಳಿಂದ ಜಗಳ ನಡೆಯುತ್ತಿತ್ತು. ಹೆಂಡತಿ ಟಾರ್ಚರ್ ನಿಂದ ನಾನು ಸಾಯ್ತೀದಿನಿ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೀಟರ್ ಪತ್ನಿ ಪಿಂಕಿ ಕಿರಕುಳದಿಂದ ಆತ್ಮಹತ್ಯೆಗೆ ಶರಣಾಗಿದ್ದು, ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದೆ ಸಂದರ್ಭದಲ್ಲಿ ಮೃತ ಪೀಟರ್ ಸಂಬಂಧಿಕರು ಶವಪೆಟ್ಟಿಗೆಯ ಮೇಲೆ ನನ್ನ ಹೆಂಡತಿಯ ಕಾಟ ತಾಳಲಾರದೆ ಸತ್ತೇನು ಎಂದು ಬರೆಸಿದ್ದಾರೆ.