ಹುಬ್ಬಳ್ಳಿ : ಸಾಲ ಕಟ್ಟುವ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಲಾರಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದರುವ ಘಟನೆ ಹುಬ್ಬಳ್ಳಿಯ ತಾರಿಹಾಳ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಹುಬ್ಬಳ್ಳಿಯ ಉಣಕಲ್ ನಿವಾಸಿ ಎಂದು ಸಿದ್ದು ಕೆಂಚಣ್ಣನವರ ಎಂದು ತಿಳಿದುಬಂದಿದೆ.
ಸಿದ್ದು ಮಹೇಶ್ ಚಿಕ್ಕವೀರ ಮಠ ಬಳಿ 10 ಲಕ್ಷ ಸಾಲ ಪಡೆದಿದ್ದ. ಆದರೆ 10 ಲಕ್ಷ ಪಡೆದ ಸಾಲಕ್ಕೆ 65 ಲಕ್ಷ ಬಡ್ಡಿ ಕಟ್ಟಿದ್ದರು ಕೂಡ ಮಹೇಶ್ ಸಿದ್ದುಗೆ ಕಿರುಕುಳ ನೀಡುತ್ತಿದ್ದ. ಇನ್ನು ಹೆಚ್ಚು ಬಡ್ಡಿ ನೀಡುವಂತೆ ಮಹೇಶ್ ಚಿಕ್ಕವೀರಮಠ ಸಿದ್ದುಗೆ ಪೀಡಿಸುತ್ತಿದ್ದ ಇದರಿಂದ ಮನದೊಂದು ಸಿದ್ದು ಡೆತ್ ನೋಟ್ ಬರೆದು ವಾಟ್ಸಪ್ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿ ಕೊಂದಿದ್ದಾನೆ. ತಾರಿಹಾಳ ಬಳಿ ಲಾರಿಗೆ ತಲೆ ಕೊಟ್ಟು ಸಿದ್ದು ಕೆಂಚಣ್ಣನವರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಿಮ್ಸ್ ಆಸ್ಪತ್ರೆ ಶವಗಾರದಲ್ಲಿ ಸಿದ್ದು ಕೆಂಚಣ್ಣನವರ ಮೃತ ದೇಹ ಇದ್ದು ಶವಾಗಾರದ ಮುಂದೆ ಸಿದ್ದುವಿನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಬಡ್ಡಿ ದಂಧೆಕೊರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹುಬ್ಬಳ್ಳಿಯ ಗೋಕುಲ ರೋಡ್ ಠಾಣೆ ಪೊಲೀಸರು ಇದೀಗ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಈ ವೇಳೆ ಸಿದ್ದು ಕುಟುಂಬದವರು ಕಮಿಷನರ್ ಶಶಿಕುಮಾರ್ ಮುಂದೆ ಕಣ್ಣೀರಿಟ್ಟಿದ್ದಾರೆ. ಇದು ಆತ್ಮಹತ್ಯೆ ಅಲ್ಲ ಯಾರೋ ಏನೋ ಮಾಡಿದ್ದಾರೆ ಎಂದು ಆತ್ಮಹತ್ಯೆಗೆ ಶರಣಾದ ಸಿದ್ದು ಕೆಂಚಣ್ಣನವರ ಪತ್ನಿ ಅಶ್ವಿನಿ ಆರೋಪಿಸಿದ್ದಾರೆ.