ಬೆಂಗಳೂರು : ತನ್ನ ಅಜ್ಜಿ ಪಿತ್ರಾರ್ಜಿತ ಆಸ್ತಿ ಕೊಟ್ಟಿಲ್ಲವೆಂದು ಮನನೊಂದ ಯುವಕನೊಬ್ಬ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲಲ್ ಶಿವನಗರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಪೃಥ್ವಿ (20) ಎಂದು ತಿಳಿದುಬಂದಿದೆ. ಯುವಕ ಡಿಗ್ರಿ ಓದುತ್ತಿದ್ದು ಅದರ ಜೊತೆಗೆ ಚಾಲಕನಾಗಿಯೂ ಕೂಡ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ತಾಯಿ ಪದ್ಮ ಕೋಣೆಗೆ ಹೋಗಿ ನೋಡಿದಾಗ ಪೃಥ್ವಿ ಫ್ಯಾನಿಗೆ ನೇಣು ಹಾಕಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಅಜ್ಜಿ ಕುಳಯಮ್ಮ ಮತ್ತಿಕೆರೆಯ ಮನೆಯೊಂದನ್ನ ತನ್ನ ಮಗನ ಮಕ್ಕಳಿಗೆ ಆಸ್ತಿ ಕೊಡದೆ ಹೆಣ್ಣು ಮಗಳಿಗೆ ಕೊಟ್ಟಿರುವ ಆರೋಪ ಕೇಳಿಬಂದಿದೆ. ಈ ವಿಷಯವಾಗಿ ಸಂಬಂಧಿಕರನ್ನ ಸೇರಿಸಿ ಮಾತುಕತೆ ಮಾಡಲಾಗಿದ್ದು, ಆದರೆ ಮಾತುಕತೆ ವಿಫಲವಾಗಿದೆ. ಈ ಘಟನೆಯಿಂದ ಮನನೊಂದ ಪೃಥ್ವಿ, ಮನೆಯ ಕೋಣೆಯಲ್ಲಿ ವೇಲ್ ಬಳಸಿ ಪ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾನೆ. ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.