ಬಳ್ಳಾರಿ : ಭಗ್ನಪ್ರೇಮಿಯೊಬ್ಬ ಪ್ರೇಯಸಿ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಮಚ್ಚಿನಿಂದ ಭೀಕರವಾಗಿ ಹಲ್ಲೆ ಮಾಡಿ, ಬಳಿಕ ಇಂದು ತಾನು ಕೂಡ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದ ಚರ್ಚ್ ಶಾಲಾ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಹೊಸಪೇಟೆ ಮೂಲದ ನವೀನ್ ಕುಮಾರ್ ಎಂದು ತಿಳಿದುಬಂದಿದೆ. ಯುವತಿ ಸೇರಿ ಕುಟುಂಬದ ಮೇಲೆ ಯುವಕ ಮಚ್ಚಿನಿಂದ ಹಲ್ಲೆ ಮಾಡಿದ ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ನವೀನ್ ಕುಮಾರ್. ಗಾಯಾಳುಗಳನ್ನು ತೋರಣಗಲ್ಲು ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಿನ್ನೆ ಪ್ರೇಯಸಿ ಸೇರಿ ಮೂವರ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದ. ಪರಸ್ಪರ ನವೀನ್ ಹಾಗೂ ಯುವತಿ ಪ್ರೀತಿಸುತ್ತಿದ್ದರು. ನವೀನ್ ಕುಮಾರ್ ಬಾಳೆಹಣ್ಣು ವ್ಯಾಪಾರ ಮಾಡಿಕೊಂಡಿದ್ದ. ಯುವತಿ ಕಾಲೇಜು ಹೋಗುವಾಗಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಎಂಸಿಎ ಓದಬೇಕು ಅಂತ ಯುವತಿ ಪ್ರೀತಿಗೆ ಬ್ರೇಕ್ ಹಾಕಿದ್ದಾಳೆ, ಇದರಿಂದ ಭಗ್ನ ಪ್ರೇಮಿ ನವೀನ್ ಕುಮಾರ್ ಅಸಮಾಧಾನಗೊಂಡು ಹಲ್ಲೆ ಮಾಡಿದ್ದಾನೆ.ನಿನ್ನೆ ಸಂಜೆ ಸಂಡೂರಿಗೆ ಬಂದು ಯುವತಿಯ ಮೇಲೆ ಹಲ್ಲೆ ಮಾಡಿದ್ದಾನೆ.
ಹಲ್ಲೆ ಮಾಡಿದ ದೇಗುಲದ ಬಳಿ ನವೀನ್ ಕುಮಾರ್ ಕಾರ್ ಬಿಟ್ಟು ಹೋಗಿದ್ದ. ಕಾರನ್ನು ವಶಕ್ಕೆ ಪಡೆದ ಪೊಲೀಸರು ನವೀನ್ ಕುಮಾರ್ ಪತ್ತೆಗೆ ಶೋಧ ನೆಡೆಸಿದ್ದರು. ಆದರೆ ಯಶವಂತ್ ನಗರದ ಬಳಿ ರೈಲಿಗೆ ತಲೆ ಕೊಟ್ಟು ನವೀನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದ. ಘಟನೆಯ ಸಂಬಂಧ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.