ಮಂಡ್ಯ : ದರೋಡೆ ಮಾಡಲು ಬಂದ ದುರುಳ ವ್ಯಕ್ತಿಯೊಬ್ಬರನ್ನು ಮರ ಕತ್ತರಿಸುವ ಯಂತ್ರದಿಂದ ವ್ಯಕ್ತಿಯ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ತೋಟದ ಮನೆಯಲ್ಲಿ ಈ ಒಂದು ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ.ಮರ ಕತ್ತರಿಸುವ ಯಂತ್ರದಿಂದ 60 ವರ್ಷದ ರಮೇಶ್ ಎನ್ನುವ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ನಿನ್ನೆ ಸಂಜೆ 7:00ಗೆ ತೋಟಕೆ ಮನೆಗೆ ವ್ಯಕ್ತಿ ಆಗಮಿಸಿ ವ್ಯಕ್ತಿಗೆ ಮರ ಕತ್ತರಿಸುವ ಯಂತ್ರದಿಂದ ರಮೇಶ್ ಅವರನ್ನು ಭೀಕರ ಮವಾಗಿ ಹತ್ಯೆ ಮಾಡಿದ್ದಾನೆ.
ಈ ವೇಳೆ ರಮೇಶ್ ಪತ್ನಿ ಯಶೋಧಮ್ಮಗೆ ಮರ ಕತ್ತರಿಸುವ ಯಂತ್ರ ಬಂದಿದೆ ಆರ್ಡರ್ ಮಾಡಿದ್ದೀರಿ ಅಂತ ಹೇಳಿದಾಗ ನಾವು ಮಾಡಿಲ್ಲ ಅಂದಾಗ ಅವರ ಕುತ್ತಿಗೆ ಹಿಡಿದು ತಳ್ಳಿದ್ದಾನೆ. ಈ ವೇಳೆ ಯಶೋದಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಆಮೇಲೆ ರಮೇಶ್ ಅವರನ್ನು ಮರ ಕತ್ತರಿಸುವ ಯಂತ್ರದಿಂದ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಸೀನಿಮಿಯ ರೀತಿಯಲ್ಲಿ ಹಂತಕ ಲಾಕ್!
ಯಶೋಧಮ್ಮ ಅವರನ್ನು ಆರೋಪಿ ತಳ್ಳಿದಾಗ ಅವರು ಪ್ರಜ್ಞೆ ತಪ್ಪಿದ್ದರು ಆದರೂ ಕೂಡ ಅವರಿಗೆ ಗಾಯವಾಗಿದ್ದರು ಆರೋಪಿಯನ್ನು ಒಂದು ಕೋಣೆಯಲ್ಲಿ ಕೋಡಿಹಾಕಿ ಅಕ್ಕಪಕ್ಕದ ಜನರನ್ನು ಹೋಗಿ ಕರೆದಿದ್ದಾರೆ ಈ ವೇಳೆ ಅಕಪಕದ ಜನ ಸ್ಥಳೀಯರು ಸೇರಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಘಟನೆ ಕುರಿತಂತೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.