ಬೆಂಗಳೂರು : ಬೆಂಗಳೂರಿನಲ್ಲಿ ಮೆಟ್ರೋ ನಿಲ್ದಾಣದಲ್ಲಿ ಸುರಕ್ಷಾತೆಗಾಗಿ ಎಷ್ಟೇ ಕಠಿಣವಾದಂತ ಕ್ರಮದ ಕೈಕೊಂಡರು ಸಹ ಆಗಾಗ ಅನಾಹುತಗಳು ಸಂಭವಿಸುತ್ತಲೆ ಇರುತ್ತವೆ. ಇದೀಗ ಬೆಂಗಳೂರಿನಲ್ಲಿ ಮೆಟ್ರೋ ಟ್ರ್ಯಾಕಿನ ಮೇಲೆ ಜಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಹೌದು ಮೆಟ್ರೋ ಟ್ರ್ಯಾಕ್ ಮೇಲೆ ಹಾರಿ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಈ ಒಂದು ಘಟನೆ ಸಂಭವಿಸಿದೆ. ಮೆಟ್ರೋ ಟ್ರೈನ್ ಬರುತ್ತಿದ್ದಂತೆ ವ್ಯಕ್ತಿ ಟ್ರ್ಯಾಕ್ಗೆ ಹಾರಿದ್ದಾನೆ. ರೈಲು ಕ್ರಮಿಸಿದ್ದರು ಸಹ ಪ್ರಾಣಾಪಾಯದಿಂದ ವ್ಯಕ್ತಿ ಪಾರಾಗಿದ್ದಾನೆ 10 ಮೀಟರ್ ರೈಲು ಕ್ರಮಿಸಿದರು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರೈಲು ಸಂಚಾರ ಬಂದ್ ಮಾಡಿ ವ್ಯಕ್ತಿನ ರಕ್ಷಿಸಿದ್ದಾರೆ.
ಏಕಾಏಕಿ ಟ್ರ್ಯಾಕಿಗೆ ಹಾರಿದ ವ್ಯಕ್ತಿಯನ್ನು ಮೆಟ್ರೋ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.ಅದೃಷ್ಟವಶಾತ್ ಯಾವುದೇ ರೀತಿಯಾದಂತಹ ಪ್ರಾಣ ಅಪಾಯ ಸಂಭವಿಸಿಲ್ಲ. ಆತ್ಮಹತ್ಯೆಗೆ ಇನ್ನೂ ನಿಖರವಾದಂತಹ ಕಾರಣ ತಿಳಿದು ಬಂದಿಲ್ಲ. ಘಟನೆ ಕುರಿತಂತೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.