ಬೆಂಗಳೂರು : ಬೆಂಗಳೂರಲ್ಲಿ ಯುವತಿಯರ ವಿಡಿಯೋ ತೆಗೆದು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದ ಆರೋಪಿಯನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಅಶೋಕನಗರ ಪೊಲೀಸರು ಹುಸೇನ್ ಎನ್ನುವ ಆರೋಪಿಯನ್ನು ಬಂಧಿಸಿದ್ದಾರೆ
ಕೊತ್ತನೂರು ಮೂಲದ ಹುಸೇನ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಈತ ಬೆಂಗಳೂರಿನ ಎಂಜಿ ರೋಡ್ ಮತ್ತು ಬ್ರಿಗೇಡ್ ರೋಡ್ ನಲ್ಲಿ ನಿಂತು ಯುವತಿಯರ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬಳಿಕ ಇನ್ಸ್ಟಾಗ್ರಾಮ್ ನಲ್ಲಿ ಅಸಭ್ಯವಾಗಿ ಪೋಸ್ಟ್ ಮಾಡುತ್ತಿದ್ದ. ಬೆಂಗಳೂರು ನೈಟ್ ಲೈಫ್ ಎಂದು ಟ್ಯಾಗ್ ಲೈನ್ ಕೊಡುತ್ತಿದ್ದ.
ಅಸಭ್ಯವಾದ ರೀತಿಯಲ್ಲಿ ವಿಡಿಯೋ ಚಿತ್ರೀಕರಿಸಿ, ಬಳಿಕ ತನ್ನ Dilbar Jaani-64 ಎಂಬ ಪ್ರೊಫೈಲ್ ನಲ್ಲಿ ಅಪ್ಲೋಡ್ ಮಾಡಿ ಬೆಂಗಳೂರು ನೈಟ್ ಲೈಫ್ ಎಂಬ ಟ್ಯಾಗ್ ಲೈನ್ ಕೊಡುತ್ತಿದ್ದ. ಎಂ ಜಿ ರೋಡ್ ಬ್ರಿಗೇಡ್ ರೋಡ್ ಗಳಲ್ಲೇ ಈತ ವಿಡಿಯೋ ಮಾಡುತ್ತಿದ್ದ. ಸದ್ಯ ಪೊಲೀಸರು ಇದೀಗ ಪೋಕ್ಸೋ ಕೇಸ್ ದಾಖಲಿಸಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.