ಬೆಂಗಳೂರು : ಬೆಂಗಳೂರಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ರಕ್ತ ಚಂದನ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ವರಪ್ರಸಾದ್ ರೆಡ್ಡಿ ಮತ್ತು ರಾಜಶೇಖರ್ ಬಂದಿದ ಆರೋಪಿಗಳು ಎಂದು ತಿಳಿದು ಬಂದಿದೆ.
ಒಟ್ಟು 75 ಲಕ್ಷ ಮೌಲ್ಯದ 739 ಕೆಜಿ ರಕ್ತ ಚಂದನ ಪೊಲೀಸರು ಜತ್ತಿ ಮಾಡಿಕೊಂಡಿದ್ದಾರೆ. ಐವತ್ತು ಅಡಿ ಉದ್ದದ 50 ಪೀಸ್ ರಕ್ತ ಚಂದನಗಳು ಪತ್ತೆಯಾಗಿವೆ. 75 ಲಕ್ಷ ಬೆಲೆಬಾಳುವ ರಕ್ತ ಚಂದನ ಪೊಲೀಸರು ಇದೀಗ ವಶಕ್ಕೆ ಪಡೆದುಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಸಹ ಅರೆಸ್ಟ್ ಮಾಡಿದ್ದಾರೆ. ಆರೋಪಿಗಳ ಹಿನ್ನೆಲೆ ನೋಡುವುದಾದರೆ ಒಬ್ಬ ಇಂಜಿನಿಯರ್ ಹಾಗೂ ಮತ್ತೊಬ್ಬ ಎಂಬಿಎ ಪದವೀಧರರು ಎಂದು ತಿಳಿದುಬಂದಿದೆ. ಆರೋಪಿಗಳು ಆಂಧ್ರಪ್ರದೇಶದ ಮೂಲದವರು ಎಂದು ತಿಳಿದುಬಂದಿದೆ.
ಇನ್ನು ಮತ್ತೊಂದು ಪ್ರಕರಣದಲ್ಲಿ ಹುಳಿಮಾವು ಪೊಲೀಸರು ಮತ್ತೊಂದು ಕಾರ್ಯಾಚರಣೆ ನಡೆಸಿದ್ದು, ರಕ್ತ ಚಂದನ ಮಾರಾಟ ಮಾಡುತ್ತಿದ್ದ ಇಬ್ಬರೂ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಇವರಿಂದ ಅರವತ್ತು ಲಕ್ಷ ಮೌಲ್ಯದ 1150 ಕೆಜಿ ರಕ್ತ ಚಂದನ ಸಾಗಿಸುತ್ತಿದ್ದರು. ಕಾರಿನ ಹಿಂಬದಿ ಸೀಟ್ ನಲ್ಲಿ ಅದರ ಕೆಳಗೆ ರಕ್ತ ಚಂದನ ಜೋಡಿಸಿ ಇಟ್ಟಿದ್ದರು. ತಮಿಳುನಾಡಿಗೆ ಮಾರಾಟ ಮಾಡಲು ತೆರಳುವ ವೇಳೆ ಖಚಿತ ಮಾಹಿತಿ ಮೇರೆಗೆ ಹುಳಿಮಾವು ಪೊಲೀಸರು ಕಾರ್ಯಚರಣೆ ನಡೆಸಿ ರಕ್ತ ಚಂದನ ವಶಕ್ಕೆ ಪಡೆದುಕೊಂಡಿದ್ದಾರೆ.








