ಬೆಂಗಳೂರು : ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ ವಿರುದ್ಧ ಆಹಾರ ಇಲಾಖೆ ಅಧಿಕಾರಿಗಳು ಮೆಗಾ ಆಪರೇಷನ್ ನಡೆಸಿದ್ದಾರೆ. ಅಕ್ರಮವಾಗಿ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿರುವವರ ವಿರುದ್ಧ ಕಾರ್ಯಚರಣೆ ನಡೆಸಿದ್ದು ಮೂರು ತಿಂಗಳಲ್ಲಿ 15056 ಅಕ್ರಮ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ಇನ್ನು 5,632 ಕಾರ್ಡ್ ಗಳ ವಿಚಾರಣೆ ಕಾಯ್ದಿರಿಸಿ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.
ಇನ್ನು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿ ಅಂದರೆ ಬಿಪಿಎಲ್ ಕಾರ್ಡ್ ಒಟ್ಟು 1,13,56,089 ಹಾಗೂ ಅಂತ್ಯೋದಯ ಕಾರ್ಡ್ 42,94,924 ಚಾಲ್ತಿಯಲ್ಲಿದ್ದು ಒಟ್ಟು 1, 53,65,889 ಪಡಿತರ ಚೀಟಿ ರಾಜ್ಯದಲ್ಲಿ ಚಾಲ್ತಿಯಲ್ಲಿವೆ ಎಂದು ತಿಳಿದುಬಂದಿದೆ.
ಕಳೆದ ಮೂರು ತಿಂಗಳಲ್ಲಿ 15056 ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲಾಗಿದ್ದು ಇನ್ನು 5632 ಬಿಪಿಎಲ್ ಕಾರ್ಡ್ ಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಇನ್ನು ಬಿಪಿಎಲ್ ಕಾರ್ಡ್ ನಿಂದ ಎಪಿಎಲ್ ಕಾರ್ಡಿಗೆ 3.9 ಲಕ್ಷ ಕಾರ್ಡ್ ಗಳನ್ನು ಬದಲಾವಣೆ ಮಾಡಲಾಗಿದ್ದು, ಇನ್ನು 4.10 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ಪರಿಷ್ಕರಣೆ ಮಾಡಲಾಗಿದೆ ಅಕ್ರಮ ಫಲಾನುಭವಿಗಳು 14 ಲಕ್ಷ ಎಂದು ಆಹಾರ ಇಲಾಖೆ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ತಿಳಿದು ಬಂದಿದೆ.








