ಮಂಡ್ಯ : ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರ ವಕಾಲತ್ತು ವಹಿಸದಂತೆ ಮದ್ದೂರು ವಕೀಲರ ನಿರ್ಧರಿಸಿದ್ದಾರೆ. ಇಂದು ಕೋರ್ಟ್ ಕಲಾಪ ಬಹಿಷ್ಕಾರ ಮಾಡಿ ಮದ್ದೂರು ವಕೀಲರ ಸಂಘ ನಿರ್ಧಾರ ಕೈಗೊಂಡಿದೆ.
ಹೌದು ಮದ್ದೂರು ತಾಲೂಕು ವಕೀಲರಿಂದ ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದಾರೆ. ಮದ್ದೂರು ತಾಲೂಕು ವಕೀಲರಿಂದ ಒಮ್ಮತದ ಸಂಘದ ಸಭೆಯಲ್ಲಿ ವಕೀಲರು ನಿರ್ಧಾರ ತೆಗೆದುಕೊಂಡಿದ್ದಾರೆ. ಇದೆ ವೇಳೆ ಮಂಡ್ಯದ ಜಿಲ್ಲಾ ವಕೀಲರ ಸಂಘಕ್ಕು ಮನವಿ ಮಾಡಲಾಗಿದೆ ಎಂದು ಮದ್ದೂರು ತಾಲೂಕು ವಕೀಲರ ಸಂಘದ ಅಧ್ಯಕ್ಷ ಶಿವಣ್ಣ ಹೇಳಿಕೆ ನೀಡಿದ್ದಾರೆ.
ಮದ್ದೂರು ಗಣೇಶ ಗಲಾಟೆ ಪ್ರಕರಣಕ್ಕೆ ಸಂಬಂಧಸಿದಂತೆ ಮದ್ದೂರು ಕೋರ್ಟ್ ಅನ್ನು ವಕೀಲರು ಬಹಿಷ್ಕಿರಿಸಿದ್ದಾರೆ. ಆರೋಪಿಗಳ ಪರ ವಕಾಲತ್ತಿಗೆ ವಕೀಲರ ಹಿಂದೇಟು ಹಾಕಿದ್ದು, ಆರೋಪಿಗಳ ಪರ ವಕಾಲತ್ತು ವಹಿಸದಂತೆ ಮದ್ದೂರು ವಕೀಲರ ನಿರ್ಧಾರ ಕೈಗೊಂಡಿದ್ದಾರೆ.