ಬೆಳಗಾವಿ : ಬೆಳಗಾವಿಯಲ್ಲಿ ಲವ್ ಜಿಹಾದ್ ಕೇಸ್ ಒಂದು ಬೆಳಕಿಗೆ ಬಂದಿದ್ದು, ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತಿಯನ್ನು ಕಿಡ್ನ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬೆಂಗಳೂರಿನಲ್ಲಿ ಅಥಣಿ ಪೊಲೀಸ್ರು ಆರೋಪಿ ಶಾಹಿಲ್ ನನ್ನ ಅರೆಸ್ಟ್ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಪೊಲೀಸರಿಂದ ಆರೋಪಿ ಶಾಹಿಲ್ ಇದೀಗ ಅರೆಸ್ಟ್ ಆಗಿದ್ದಾನೆ. ಕಳೆದ ವಾರ ಅಪ್ರಾಪ್ತೆಯನ್ನು ಅಪಹರಿಸಿ ಆರೋಪಿ ಶಾಹಿಲ್ ಕರೆದೋಯ್ದಿದ್ದ.
ಬೆಳಗಾವಿ ಜಿಲ್ಲೆಯ ಅಥಣಿಯಿಂದ ಅಪ್ರಾಪ್ತೇ ಬಾಲಕಿಯನ್ನು ಅಪಹರಿಸಿದ್ದ ಶಾಹಿಲ್ ಆತನ ಕಪಿಮುಷ್ಠಿಯಲ್ಲಿ ಇದ್ದ ಬಾಲಕಿಯನ್ನು ಇದೀಗ ಅಥಣಿ ಪೊಲೀಸರು ರಕ್ಷಣೆ ಮಾಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ಎರಡು ವಿಶೇಷ ತನ್ನ ರಚಿಸಿದ್ದರು. ಬೆಂಗಳೂರಿನಲ್ಲಿ ಇದೀಗ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.
ತನ್ನ ಸಂಬಂಧಿ ಹುಡುಗಿ ಇಂದ ಅಪ್ರಾಪ್ತೆಯನ್ನು ಆರೋಪಿ ಶಾಹಿಲ್ ಪರಿಚಯ ಮಾಡಿಕೊಂಡಿದ್ದ. ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕಿಯ ಜೊತೆಗೆ ಶಾಹಿಲ್ ಸ್ನೇಹ ಮಾಡಿದ್ದ. ಸಂಬಂಧಿಕರ ಹುಡುಗಿ ಮತ್ತು ಅಪ್ರಾಪ್ತ ಬಾಲಕಿಯನ್ನು ಎರಡು ಮೂರು ಬಾರಿ ಹೋಟೆಲ್ಗೆ ಕರೆದುಕೊಂಡು ಹೋಗಿದ್ದ. ಆರಂಭದಲ್ಲಿ ನಂಬಿಕೆ ಗಿಟ್ಟಿಸಿಕೊಂಡು ಬಳಿಕ ಅಪ್ರಾಪ್ತೆ ಜೊತೆಗೆ ಸುತ್ತಾಡಿದ್ದ.
ಬಾಲಕಿಗೆ ಮೈಂಡ್ ವಾಷ್ ಮಾಡಿದ್ದ ಮುಂದೊಂದು ದಿನ ಇಡೀ ಭಾರತವೇ ಮುಸ್ಲಿಮ ರಾಷ್ಟ್ರ ಆಗಲಿದೆ ಎಂದು ಸಂಬಂಧಿ ಹುಡುಗಿ ಮೂಲಕ ಮೈಂಡ್ ವಾಷ್ ಮಾಡಿಸಿದ್ದ. ಹಿಂದೂ ಧರ್ಮ ಬಿಟ್ಟು ಮತಾಂತರ ಆಗುವಂತೆ ಒತ್ತಡ ಹೇರಿದ್ದ. ನೀನು ಇಸ್ಲಾಂ ಧರ್ಮಕ್ಕೆ ಬಂದರೆ ಮದುವೆಯಾಗಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಬಾಲಕಿಯ ಮೊಬೈಲ್ ಗೆ ವಾಟ್ಸಪ್ ಸಂದೇಶ ಕಳುಹಿಸಿದ್ದ.
ಈ ಬಗ್ಗೆ ಪೋಷಕರು ಮಾಹಿತಿ ಹಂಚಿಕೊಂಡಿದ್ದಾರೆ ಆರೋಪಿ ಶಾಹಿಲ್ ಮಾತಿಗೆ ಪಿಯುಸಿ ವಿದ್ಯಾರ್ಥಿನಿ ಮರುಳಾಗಿದ್ದಳು. ಜನವರಿ 28ಕ್ಕೆ ವಿದ್ಯಾರ್ಥಿ ನಿಗೆ 18 ವರ್ಷ ಪೂರ್ಣವಾಗುತ್ತಿರುವ ಹಿನ್ನೆಲೆ ಬಳಿಕ ಮದುವೆ ಆಗಬೇಕು ಎಂದು ಶಾಹಿಲ್ ಪ್ಲಾನ್ ಮಾಡಿದ್ದ ಅಥಣಿಯಿಂದ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿದ್ದ. ಪುತ್ರಿ ಮನೆಗೆ ಬಾರದಿದ್ದಾಗ ಬಾಲಕಿಯ ತಾಯಿ ನಾಪತ್ತೆ ದೂರು ನೀಡಿದ್ದರು. ಪ್ರಕರಣ ಗಂಭೀರವಾಗಿ ಪರಿಗಣಿಸಿ ಪೊಲೀಸರು ಆರೋಪಿಯನ್ನ ಅರೆಸ್ಟ್ ಮಾಡಿದ್ದು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.








