ರಾಮನಗರ : ಕ್ರಷರ್ ನಿಂದ ಜಲ್ಲಿ ಸಾಗಿಸುತ್ತಿದ್ದ ಲಾರಿ ಮಾಲೀಕನಿಗೆ ನೋಟಿಸ್ ನೀಡಲಾಗಿತ್ತು. ಆದರೆ ನೋಟಿಸ್ ಗೆ ಹೆದರಿದ ಲಾರಿ ಚಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರದಲ್ಲಿ ನಡೆದಿದೆ.
ಲಾರಿ ಚಾಲಕ ಗಣಿ ಮತ್ತು ಭೂ ವಿಜ್ಞಾನ ಕಚೇರಿಯ ಬಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ರಾಮನಗರದಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿಯ ಬಳಿ ಮಾಗಡಿ ಮೂಲದ ನಾಗೇಶ್ (50) ಆತ್ಮಹತ್ಯೆಗೆ ಶರಣಾದ ಲಾರಿ ಚಾಲಕ ಎಂದು ತಿಳಿದುಬಂದಿದೆ.
ಸದ್ಯ ಕಚೇರಿ ಆವರಣದ ಮರದಲ್ಲಿ ನಾಗೇಶ್ ಶವ ನೇತಾಡುತ್ತಿದೆ. ಘಟನಾ ಸ್ಥಳಕ್ಕೆ ರಾಮನಗರದ ಐಜೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಧಿಕಾರಿಗಳ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಆರೋಪ ಕೂಡ ಕೇಳಿ ಬಂದಿದೆ.
ಮಧ್ಯಾಹ್ನ ಕಚೇರಿಗೆ ಬಂದಿದ್ದ ಲಾರಿ ಮಾಲೀಕ ನಾಗೇಶ್ ನನಗೆ ನೋಟಿಸ್ ಯಾಕೆ ಕೊಟ್ಟಿದ್ದೀರಿ ಅಂತ ಪ್ರಶ್ನೆ ಮಾಡಿದ್ದಾನೆ. ನಿಯಮ ಉಲ್ಲಂಘನೆ ಆಗಿದೆ ಅದಕ್ಕೆ ಕಾರಣ ಕೊಡಿ ಎಂದು ಗಡಿ ಮತ್ತು ಭೂ ವಿಜ್ಞಾನ ಅಧಿಕಾರಿ ತಿಳಿಸಿದ್ದಾರೆ. ಈ ವೇಳೆ ನಾಗೇಶ್ ಕಚೇರಿಯಿಂದ ನೇರವಾಗಿ ತೆರಳಿ ನೇಣು ಹಾಕಿಕೊಂಡಿದ್ದಾನೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲಾಧಿಕಾರಿ ಪರಿಶೀಲನೆ ನಡೆಸುತ್ತಿದ್ದಾರೆ ಲಾರಿ ಮಾಲೀಕನಿಗೆ ಕಳಿಸಿದ್ದ ನೋಟಿಸ್ ಪ್ರತಿ ನೀಡಲು ಸೂಚನೆ ನೀಡಲಾಗಿದೆ ರಾಮನಗರ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಆದೇಶಿಸಿದ್ದಾರೆ.