ಬೆಂಗಳೂರು : ಬೆಂಗಳೂರಿನ ಮಾಪನ ಸೌಧ ಮೇಲೆ ಇಂದು ದಿಢೀರ್ ಆಗಿ ಲೋಕಾಯುಕ್ತ ದಾಳಿ ಮಾಡಿದೆ. ಲಂಚಕ್ಕೆ ಬೇಡಿಕೆ ಹಾಗೂ ಫೈಲ್ ಪೆಂಡಿಂಗ್ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾ.ಬಿಎಸ್ ಪಾಟೀಲ್, ಉಪಲೋಕಾಯುಕ್ತ ನ್ಯಾ.ಬಿ ವೀರಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಉಪ ಲೋಕಾಯುಕ್ತ ಫಾಣಿಂದ್ರ ಸಹ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ದಾಳಿಯ ವೇಳೆ 6 ಎಸ್ ಪಿ ಸೇರಿದಂತೆ 30ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ. ಮುಂದಿನ 10 ದಿನಕ್ಕೂ ಹಾಜರಾತಿ ಸಹಿ ಮಾಡಿದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮಾಪನಸೌಧದ ರೆಜಿಸ್ಟರ್ ಬುಕ್ ಇಟ್ಕೊಂಡು ತರಾಟೆ ತೆಗೆದುಕೊಂಡಿದ್ದಾರೆ. ಈ ವೇಳೆ ನ್ಯಾ. ವೀರಪ್ಪ ಸಿಬ್ಬಂದಿಗಳ ಫೋನ್ ಪೇ ಚೆಕ್ ಮಾಡಿದ್ದಾರೆ. ಮೊಬೈಲ್ ನಲ್ಲಿ ಹಣ ವರ್ಗಾವಣೆ ಮಾಡಿಕೊಂಡ ಮಾಹಿತಿ ಇದೀಗ ತಿಳಿದು ಬಂದಿದೆ.
ಹೀಗಾಗಿ ಅಧಿಕಾರಿಗಳ ಫೋನ್ ಪೇ ಗಳನ್ನು ಕೂಡ ಪರಿಶೀಲನೆ ನಡೆಸಲಾಗುತ್ತಿದೆ. 50 ಸಾವಿರದಿಂದ ರಿಂದ 1 ಲಕ್ಷ ಹೇಗ್ರಿ ನಿಮ್ಮ ಅಕೌಂಟಿಗೆ ಬಂತು ಎಂದು ಪ್ರಶ್ನಿಸಿದ್ದಾರೆ ಜ್ಯೋತಿ ಎಂಬ ಸಿಬ್ಬಂದಿಗೆ ವೀರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೆ ವೇಳೆ ಸಿಬ್ಬಂದಿಗಳ ಹಾಗೂ ಅಧಿಕಾರಿಗಳ ಮೊಬೈಲ್ ಗಳನ್ನು ಪರಿಶೀಲಿಸಿದಾಗ ಮತ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ ಒಬ್ಬರ ಮೊಬೈಲಲ್ಲಿ 50,000 ದಿಂದ ಒಂದು ಲಕ್ಷದವರೆಗೂ ಹಣ ವರ್ಗಾವಣೆಯಾಗಿರುವುದು ಕಂಡು ಬಂದಿದೆ.