ಕೋಲಾರ : ಸೀಜ್ ಮಾಡಿದ ಬೈಕ್ ಬಿಡಲು PSI 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ಇದೀಗ ಪಿಎಸ್ಐನ್ನು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಒಳಪಡಿಸದ್ದಾರೆ.
ಬೂದಿಕೋಟೆ ಪಿಎಸ್ಐ ಸುನಿಲ್ ಕುಮಾರನ್ನು ಈಗ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆಯಲ್ಲಿ ಮಧ್ಯವರ್ತಿಗಳಿಂದ 10,000 ಲಂಚ ಪಡೆದ ಆರೋಪ ಪಿಎಸ್ಐ ಸುನಿಲ್ ಕುಮಾರ್ ಮೇಲೆ ಬಂದಿದೆ. ಬೂದಿಕೋಟೆ ಪೊಲೀಸ್ ಠಾಣೆ ಬಾಗಿಲು ಹಾಕಿ ಇದೀಗ ಲೋಕಾಯುಕ್ತ ಪೊಲೀಸರು ಪಿಎಸ್ಐ ಸುನಿಲ್ ಕುಮಾರ್ ವಿಚಾರಣೆ ನಡೆಯುತ್ತಿದೆ.