ಹೊಸದಿಲ್ಲಿ : ಲೋಕಸಭೆ ಚುನಾವಣೆ-2024ಕ್ಕೆ ಇಷ್ಟರಲ್ಲಿಯೇ ದಿನಾಂಕ ಘೋಷಿಸಲಾಗುತ್ತದೆ ಎಂದು ಸುದ್ದಿ ಹರಡುತ್ತಿರುವ ಬೆನ್ನಲ್ಲಿಯೇ, ಮಹತ್ವದ ಸಂದೇಶವೊಂದನ್ನು ಚುನಾವಣಾ ಆಯೋಗತನ್ನ ಎಕ್ಸ್ ಹ್ಯಾಂಡಲ್ನಲ್ಲಿ ಹರಿಬಿಟ್ಟಿದೆ.ಸಾಮಾಜಿಕ ಜಾಲತಾಣದಲ್ಲಿನ ವೈರಲ್ ವಿಚಾರಕ್ಕೆ ಆಯೋಗ ಇದೀಗ ಸ್ಪಷ್ಟನೆ ನೀಡಿದೆ.
ಲೋಕಸಭಾ ಚುನಾವಣೆ ದಿನಾಂಕದ ವಿಡಿಯೋ ವೈರಲ್ ವಿಚಾರವಾಗಿ ಇದು ಕೇವಲ ಟಿಪ್ಪಣಿ ಮಾತ್ರ ಅಂತಿಮ ದಿನಾಂಕವಲ್ಲ ಎಂದು ಚುನಾವಣಾ ಆಯೋಗದ ಸ್ಪಷ್ಟನೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿನ ವೈರಲ್ ವಿಚಾರಕ್ಕೆ ಆಯೋಗ ಇದೀಗ ಸ್ಪಷ್ಟನೆ ನೀಡಿದೆ.
ಏಪ್ರಿಲ್ 16ನ್ನು ಲೋಕಸಭೆ ಚುನಾವಣೆ ಮತದಾನದ ಹಂತಗಳ ಆರಂಭದ ದಿನಾಂಕ ಎಂದು ನಿಗದಿಪಡಿಸಲಾಗಿದೆಯೇ? ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೆಲವು ಮಾಧ್ಯಮಗಳು ನಮ್ಮನ್ನು ಸಂಪರ್ಕಿಸಿವೆ. ಏಪ್ರಿಲ್ 16 ಚುನಾವಣಾ ಆಯೋಗದ ಅಧಿಕಾರಿಗಳು ಮುಂದಿನ ಕಾರ್ಯಯೋಜನೆಯನ್ನು ರೂಪಿಸಲು ಪರಿಶೀಲನೆಗಾಗಿ ಈ ದಿನಾಂಕವನ್ನು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ ಎಂದು ಚುನಾವಣಾ ಆಯೋಗ ಎಕ್ಸ್ನಲ್ಲಿ ಸ್ಪಷ್ಟನೆ ನೀಡಿದೆ.
ಅದರ ಪ್ರಕಾರ, ಪರಿಶೀಲನೆʼಗಾಗಿ ದಿನಾಂಕವೊಂದನ್ನು ತಾತ್ಕಾಲಿಕವಾಗಿ ನಿಗದಿಪಡಿಸಿರುವುದಾಗಿ ತಿಳಿಸಿದೆ. ಆ ದಿನಾಂಕ ಏಪ್ರಿಲ್ 16. ಆಯೋಗದ ಪ್ರಕಾರ ಇದು ಅಧಿಕಾರಿಗಳ ಕರ್ತವ್ಯ ಪರಿಪಾಲನೆಯ ಪರಿಶೀಲನೆ ಗಾಗಿ ನಿಗದಿಪಡಿಸಲಾದ ತಾತ್ಕಾಲಿಕ ದಿನಾಂಕವಾಗಿದೆ.