ದಕ್ಷಿಣಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮದಲ್ಲಿ ಅಂಡಿರುಮಾರು ಪ್ರದೇಶದಲ್ಲಿ ಚಿರತೆ ದಾಳಿ ಮಾಡಿದೆ. ಚಿರತೆಯ ದಾಳಿಯ ವೇಳೆ ಅಡಿಕೆ ಮರವೇರಿ ಮಂಜಪ್ಪ ನಾಯಕ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹೌದು ಇಂದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಮನೆಯ ಮುಂದೆಯೇ ಚಿರತೆ ಪ್ರತ್ಯಕ್ಷವಾಗಿತ್ತು. ಚಿರತೆ ದಾಳಿ ಮಾಡಿದ ತಕ್ಷಣ ಮಂಜಪ್ಪ ಅಡಿಕೆ ಮರವೇರಿದ್ದಾನೆ. ಆದರೂ ಮಂಜಪ್ಪ ನಾಯಕನ ಕಾಲನ್ನು ಕಚ್ಚಿ ಚಿರತೆ ಎಳೆದು ಬಿಸಾಡಿತ್ತು. ಈ ವೇಳೆ ಮಂಜಪ್ಪ ನಾಯಕ ಜೋರಾಗಿ ಹೋಗಿಕೊಂಡಿದ್ದಾನೆ. ಮನೆಯವರು ಹೊರಬಂದು ಕೂಡಿಕೊಂಡಾಗ ಚಿರತೆ ಅಲ್ಲಿಂದ ಓಡಿಹೋಗಿದೆm ಮಂಜಪ್ಪನನ್ನು ತಾಲೂಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.








