ಬೆಂಗಳೂರು : ಇಷ್ಟು ದಿನ ಬೆಂಗಳೂರು ಶಾಂತವಾಗಿತ್ತು ಇದೀಗ ಮತ್ತೆ ಬೆಂಗಳೂರಿನ ಜನತೆಗೆ ಚಿರತೆಯ ಕಾಟ ಶುರುವಾಗಿದೆ. ಕೆಂಪೇಗೌಡ ಲೇಔಟ್ ನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು , ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.
ಬೆಂಗಳೂರಿನ ಕೆಂಗೇರಿ ಸಮೀಪದ ಕೆಂಪೇಗೌಡ ಲೇಔಟ್ ನಲ್ಲಿ ಕಳೆದ ಮೂರು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಕೆಂಪೇಗೌಡ ಲೇಔಟ್ ನ ಭೀಮನಕುಪ್ಪೆ ಕೆರೆ ಬಳಿ ಚಿರತೆ ಓಡಾಡುತ್ತಿರುವುದು ಕಂಡು ಬಂದಿದೆ. ಚಿರತೆ ಕಂಡು ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ.