ಬೆಂಗಳೂರು : ಇಷ್ಟು ದಿನ ಬೆಂಗಳೂರು ಶಾಂತವಾಗಿತ್ತು ಇದೀಗ ಮತ್ತೆ ಬೆಂಗಳೂರಿನ ಜನತೆಗೆ ಚಿರತೆಯ ಕಾಟ ಶುರುವಾಗಿದೆ. ಹೌದು ಬೆಂಗಳೂರಿನ ತಲಘಟ್ಟಪುರ ಸಮೀಪ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬೆಳಿಗ್ಗೆಯಿಂದ ಚಿರತೆಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಚಿರತೆ ಕಂಡು ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ. ಸಂಜೆಯ ಬಳಿಕ ಪಟಾಕಿ ಸಿಡಿಸಿ ಚಿರತೆಯನ್ನು ಸೆರೆ ಹಿಡಿಯಲು ಪ್ಲಾನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.