ಮಂಡ್ಯ : ಇತ್ತೀಚಿಗೆ ಬೆಂಗಳೂರು ನಗರದಲ್ಲಿ ಚಿರತೆಯ ಕಾಟದಿಂದ ಜನರು ಭಯಭರಿತರಾಗಿದ್ದರು. ಕೂಡಲೆ ಅರಣ್ಯ ಅಧಿಕಾರಿಗಳು ಮೂರು ಚಿರತೆಗಳನ್ನು ಸೆರೆ ಹಿಡಿದು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ದಿಗ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗಂಗಾಧರ ನಗರದಲ್ಲಿ ಚಿರತೆಯೊಂದು ರಾತ್ರಿಯ ವೇಳೆ ನಾಯಿಯನ್ನು ಹೊತ್ತೊಯ್ದು ಕೊಂಡಿರುವ ಘಟನೆ ನಡೆದಿದೆ.
ಹೌದು ಮನೆ ಕಾಯುತ್ತಿದ್ದ ನಾಯಿಯನ್ನೇ ಹೊತ್ತುಕೊಂಡು ಹೋದ ಚಿರತೆ ಮಂಡ್ಯದ ಗಂಗಾಧರ ನಗರದ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಚಿರತೆ ದಾಳಿ ಮಾಡಿರುವಂತಹ ಸಿಸಿಟಿವಿಯಲ್ಲಿ ಸೆರಿಯಾಗಿದೆ. ಮಂಡ್ಯದ ನಾಗಮಂಗಲ ತಾಲೂಕಿನ ಗಂಗಾಧರ ನಗರದಲ್ಲಿ ನಡೆದಿದೆ.
ಪದೇ ಪದೇ ಈ ಗ್ರಾಮದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ ಹಸು, ನಾಯಿಗಳ ಮೇಲೆ ಈಗಾಗಲೇ ಚಿರತೆ ಹಲವು ಬಾರಿ ದಾಳಿ ಮಾಡಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು ಕೂಡ ಅವರು ನಿರ್ಲಕ್ಷ ತೋರಿದ್ದಾರೆ. ನಿನ್ನೆ ಮತ್ತೆ ಗ್ರಾಮಕ್ಕೆ ನುಗ್ಗಿ ನಾಯಿಯನ್ನು ಹೊತ್ತೋಯ್ದುಕೊಂಡಿದೆ. ರಾಮದಾಸ ಎನ್ನುವವರ ಮನೆಯ ನಾಯಿಯನ್ನು ಚಿರತೆ ಎಳೆದೋಯಿದಿದೆ.








