ಹಾವೇರಿ : ಜಮೀನು ಒಂದರ ನಕಾಶೆ ನೀಡಲು ವ್ಯಕ್ತಿ ಒಬ್ಬರ ಬಳಿ 15,000 ಲಂಚ ಸ್ವೀಕರಿಸುತ್ತಿದ್ದ ವೇಳೆ ಲ್ಯಾಂಡ್ ಸರ್ವೆಯರ್ ಒಬ್ಬ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಗಿ ಬಿದ್ದಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ರೈತ ಮಂಜುನಾಥ ಕಡ್ಲಿ ಅವರು ಹಾವೇರಿ ತಾಲ್ಲೂಕಿನ ಕಳ್ಳಿಹಾಳ ಗ್ರಾಮದಲ್ಲಿ ತಮ್ಮ ಜಮೀನು ವಾಟ್ನಿ ಮಾಡಿಸಲು ಅರ್ಜಿ ಸಲ್ಲಿಸಿದ್ದರು. ವಾಟ್ನಿ ಮಾಡಿಸುವುದಕ್ಕೆ ಜಮೀನು ನಕಾಶೆ ಅಗತ್ಯವಿತ್ತು ಹಾಗಾಗಿ ಹಾವೇರಿ ತಾಲ್ಲೂಕು ಭೂ ದಾಖಲೆಗಳ ಸಹಾಯಕ ಕಚೇರಿಯ ಭೂಮಾಪಕ ಅಶೋಕ ಎಚ್.ಜಿ ಎನ್ನುವವರ ಬಳಿ ಮಂಜುನಾಥ್ ಅರ್ಜಿ ಸಲ್ಲಿಸಿದ್ದರು.
ನಕಾಶೆ ನೀಡಲು ಅಶೋಕ 30 ಸಾವಿರ ರೂ.ಕೇಳಿದ್ದ. ಅಷ್ಟು ಹಣವಿಲ್ಲವೆಂದು ರೈತ ಹೇಳಿದ್ದರು. ನಂತರ, 25 ಸಾವಿರಕ್ಕೆ ಮಾತುಕತೆ ಆಗಿತ್ತು. ಈ ಬಗ್ಗೆ ಮಂಜುನಾಥ ಅವರು ಕಚೇರಿಗೆ ದೂರು ಸಲ್ಲಿಸಿದ್ದರು. ಶನಿವಾರ ಮುಂಗಡವಾಗಿ 15 ಸಾವಿರ ಲಂಚ ಪಡೆಯುವ ಸಂದರ್ಭದಲ್ಲಿ ದಾಳಿ ಮಾಡಿ ಅಶೋಕ ಅವರನ್ನು ಪುರಾವೆ ಸಮೇತ ಸೆರೆ ಹಿಡಿಯಲಾಗಿದೆ ಎಂದು ತಿಳಿದುಬಂದಿದೆ.