ಕಲಬುರ್ಗಿ : ಜಿಲ್ಲೆಯ ಆಳಂದ ಪಟ್ಟಣದಲ್ಲಿ ಇರುವ ವಿವಾದಿತ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗ ಪೂಜೆ ನಡೆಸಲು ರಾಘವ ಚೈತನ್ಯ ರಥಯಾತ್ರೆ ನಡೆಸಲು ಹಿಂದೂ ಮುಖಂಡರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.ಇದೀಗ ಕಲ್ಬುರ್ಗಿ ಹೈಕೋರ್ಟ್ ಪೀಠ ರಥಯಾತ್ರೆಗೆ ಷರತ್ತು ಬದ್ಧ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.
ರಾಘವ ಚೈತನ್ಯ ರಥಯಾತ್ರೆಗೆ ಷರತ್ತು ಬದ್ದ ಅನುಮತಿ ನೀಡಿರುವ ಕಲಬುರ್ಗಿ ಹೈಕೋರ್ಟ್ ಪೀಠ, ಕಲ್ಬುರ್ಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ರಾಘವ ಚೈತನ್ಯ ರಥಯಾತ್ರೆ ನಡೆಯಲಿದ್ದು, ರಥಯಾತ್ರೆಗೆ ಅನುಮತಿ ಕೋರಿ ಹಿಂದು ಮುಖಂಡರು ಅರ್ಜಿ ಸಲ್ಲಿಸಿದ್ದರು.ಲಾಡ್ಲೆ ಮಶಾಕ್ ದರ್ಗಾ ವಿವಾದ ಹಿನ್ನೆಲೆ ಇದೀಗ ಕಲ್ಬುರ್ಗಿ ಹೈಕೋರ್ಟ್ ಪೀಠ ಷರತ್ತು ಬದ್ಧ ಅನುಮತಿ ನೀಡಿದೆ.
ಧನ, ಹೆಸರು, ಕೀರ್ತಿ, ಅಂತಸ್ತು, ಸಕಲ ಭಾಗ್ಯಗಳನ್ನು ಪಡೆಯಲು-ಜೀವನದಲ್ಲಿ ಮೇಲೇರಲು ನರಸಿಂಹ ಮಂತ್ರ ಪಠಿಸಿ
ಯಾತ್ರೆಯ ವೇಳೆ ಡಿಜೆ ಟ್ರಾಫಿಕ್ ನಿಯಮ ಉಲ್ಲಂಘಿಸುವಂತಿಲ್ಲ. ಅನ್ಯ ಸಮುದಾಯದ ವಿರುದ್ಧ ಯಾರೂ ಘೋಷಣೆ ಕೂಗುವಂತಿಲ್ಲ. ವಿವಾದಿತ ಸ್ಥಳದ ಕಡೆ ರಾಘವ ಚೈತನ್ಯ ರಥ ಯಾತ್ರೆ ಹೋಗುವಂತಿಲ್ಲ. ಸೂರ್ಯಸ್ತದ ನಂತರ ರಥಯಾತ್ರೆ ಬಂದ್ ಮಾಡಬೇಕು ಎಂದು ಪೀಠ ಹೇಳಿದೆ.
2023 ರ ‘ಆಂಧ್ರ ರೈಲು ಅಪಘಾತ’:ಮೊಬೈಲ್ ನಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದ ಚಾಲಕ : ಸಚಿವ ಅಶ್ವಿನಿ ವೈಷ್ಣವ್
ರಾಘವ ಚೈತನ್ಯ ಅವರು ಈಶ್ವರಲಿಂಗ ಪ್ರತಿಷ್ಠಾಪನೆ ಮಾಡಿದ ಆ ಸ್ಥಳ ಅದು. ಅದನ್ನು ಅತಿಕ್ರಮಣ ಮಾಡಿಕೊಂಡಿದ್ದು ಮುಸ್ಲಿಮರು. ಈಗ ದರ್ಗಾ ಮಾಡಿ ಉರುಸ್ ಮಾಡುತ್ತಿದ್ದಾರೆ. ನೂರಾರು ವರ್ಷದ ಹಿಂದಿನ ಪವಿತ್ರ ಕ್ಷೇತ್ರವಿದು. ಪೂಜೆ ಸಲ್ಲಿಸಲು ಕಳೆದ ವರ್ಷವೇ ಕೋರ್ಟ್ ಅನುಮತಿ ಕೊಟ್ಟಿತ್ತು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಈ ಹಿಂದೆ ತಿಳಿಸಿದ್ದರು.