ಹಾಸನ : ಹಾಸನದಲ್ಲಿ ಭೀಕರ ಅಪಘಾತ ಸಂಬಂಧಿಸಿದ್ದು, ಲಾರಿಗೆ ಹಿಂಬದಿಯಿಂದ ಸಾರಿಗೆ ಬಸ್ ಡಿಕ್ಕಿಯಾಗಿ ಹಲವು ಪ್ರಯಾಣಿಕರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಸಮೀಪ ಈ ಒಂದು ಅಪಘಾತ ಸಂಭವಿಸಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿಯಲ್ಲಿ ಬೆಂಗಳೂರಿನಿಂದ ಹಾಸನದ ಕಡೆಗೆ ಲಾರಿ ಹಾಗೂ ಬಸ್ ಬರುತ್ತಿತ್ತು. ಸಾರಿಗೆ ಬಸ್ ಚಾಲಕ ನಿದ್ದೆ ಮಂಪರಿನಲ್ಲಿ ಲಾರಿಗೆ ಡಿಕ್ಕಿ ಹೊಡೆದ ಶಂಕೆ ವ್ಯಕ್ತವಾಗಿದ್ದು, ಗಾಯಗೊಂಡ ಪ್ರಯಾಣಿಕರಿಗೆ ಹಾಸನ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








