ರಾಮನಗರ : ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಭಾರಿ ದುರಂತ ಒಂದು ತಪ್ಪಿದ್ದು 110 ಪ್ರಯಾಣಿಕರನ್ನು ಸಾಗುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಒಂದು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ, ಪ್ರಪಾತಕ್ಕೆ ಬೀಳುವ ಮುನ್ನ ಕೂದಲಿ ಅಂತರದಲ್ಲಿ ಪಾರಾಗಿರುವ ಘಟನೆ, ಕನಕಪುರದ ಸಂಗಮ ಘಾಟ್ ಬಳಿ ನಡೆದಿದೆ.
ಹೌದು ಹೊಸ ವರ್ಷದ ದಿನ ಭಾರಿ ದುರಂತ ತಪ್ಪಿದೆ. ಕನಕಪುರದ ಸಂಗಮ ಘಾಟ್ ಬಳಿ ಬಸ್ ಬ್ರೇಕ್ ಫೇಲ್ ಆಗಿದೆ. ಬಸ್ ನಲ್ಲಿದ್ದ 110 ಪ್ರಯಾಣಿಕರು ಜಸ್ಟ್ ಮಿಸ್ ಆಗಿದ್ದಾರೆ. ಬ್ರೇಕ್ ಫೇಲ್ ಆಗಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಪ್ರಪಾತಕ್ಕೆ ಬೀಳುತ್ತಿದ್ದ ಬಸ್ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ತಡೆಗೋಡೆಗೆ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದು ಅದೃಷ್ಟವಶಾತ್ 110 ಪ್ರಯಾಣಿಕರು ಬಚಾವ್ ಆಗಿದ್ದಾರೆ.