ಬೆಂಗಳೂರು : ಹಿಂದಿನಿಂದ ವೇಗವಾಗಿ ಬಂದ ಕೆ ಎಸ್ ಆರ್ ಟಿ ಸಿ ಬಸ್ ಒಂದು ಬೈಕ್ ಗೆ ಡಿಕ್ಕಿ ಹೊಡೆದಿರುವ ಪರಿಣಾಮ ಬೈಕ್ ಸವಾರ ಫುಡ್ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ನಡೆದಿದೆ.
ಘಟನೆ ತಡರಾತ್ರಿ ಒಂದು ಗಂಟೆ ಸುಮಾರಿಗೆ ನಡೆದಿರುವ ಅಪಘಾತವಾಗಿದೆ. ಫುಡ್ ಡೆಲಿವರಿ ಬಾಯ್ ಬಸವರಾಜ್ ದುರ್ಮರಣ ಹೊಂದಿದ್ದಾರೆ.ಹಿಂದಿನಿಂದ ವೇಗವಾಗಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿರುವ ಪರಿಣಾಮವಾಗಿ ಫುಡ್ ಡೆಲಿವರಿ ಬಸವರಾಜ್ ಸ್ಥಳದಲ್ಲಿ ಸಾವನಪ್ಪಿದ್ದಾರೆ. ಬ್ಯಾಟರಾಯನಪುರ ಸಂಚಾರಿ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕ ಸಾವು
ಬೆಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಮರಕ್ಕೆ ಡಿಕ್ಕಿಯಾಗಿ ಬಳಿಕ ಕಂಪೌಂಡಿಗೆ ಕಾರು ಗುದ್ದಿದೆ ಕಾರಿನಲ್ಲಿದ್ದ ಮಲ್ವೆನ್ ಜೋಶ್ವ (25)ಎನ್ನುವ ಯುವಕ ದುರ್ಮರಣ ಹೊಂದಿದ್ದಾನೆ . ತಡರಾತ್ರಿ 2.10ರ ಸುಮಾರು ನಡೆದಿರುವ ಘಟನೆಯಾಗಿದೆ ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.