ಕೋಲಾರ : ಕೋಲಾರದಲ್ಲಿ ಭೀಕರವಾದ ಕೊಲೆ ನಡೆದಿದ್ದು, ರೌಡಿಶೀಟರ್ ಒಬ್ಬ ತನ್ನ ಪ್ರಿಯತಮೇ ಜೊತೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಸಿಕ್ಕ ಸಿಕ್ಕಲ್ಲಿ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಕೆ ಜಿ ಎಫ್ ತಾಲೂಕಿನಲ್ಲಿ ನಡೆದಿದೆ.
ಹತ್ಯೆಯಾದ ರೌಡಿಶೀಟರ್ ನನ್ನು ಶಿವಕುಮಾರ್ ಅಲಿಯಾಸ್ ತೇನ್ ಕೊಲೆಯಾದವ ಎಂದು ತಿಳಿದುಬಂದಿದೆ. ಮಾರಿಕೊಪ್ಪಂನ ರಿವೀಟರ್ಸ್ ಲೈನ್ ನಿವಾಸಿ ಶಿವಕುಮಾರ್ ನನ್ನು ಹತ್ಯೆ ಮಾಡಲಾಗಿದೆ. ಪ್ರಿಯತಮೆ ಜೊತೆ ಕಾಮಸಮುದ್ರಕ್ಕೆ ಹೋಗುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಕುರಿತು ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ರೌಡಿಶೀಟರ್ ಜೊತೆಗಿದ್ದ ಪ್ರಿಯತಮೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕೊಲೆಯಾದ ಶಿವಕುಮಾರ್ ಆಂಡರ್ಸನ್ ಪೇಟೆ ಠಾಣೆಯ ರೌಡಿಶೀಟರ್ ಎಂದು ತಿಳಿದುಬಂದಿದೆ. ಶಿವಕುಮಾರ್ ವಿರುದ್ಧ 3 ಕೊಲೆ ಮತ್ತು ಹಲ್ಲೆ ಪ್ರಕರಣಗಳು ಇದ್ದವು.