ಬೆಂಗಳೂರು : ಮುಂಬರುವ ಜಿಬಿಎ ಚುನಾವಣೆಗೆ ಈ ಬಾರಿ ಇವಿಎಂ ಮಷಿನ್ ಗೆ ಕೊಕ್ ನೀಡಲಾಗಿದ್ದು ಬ್ಯಾಲೆಟ್ ಪೇಪರ್ ಬಳಸಲು ನಿರ್ಧರಿಸಲಾಗಿದೆ. ಈ ಬಾರಿ ಬ್ಯಾಲೆಟ್ ಪೇಪರ್ ಬಳಸಲಾಗುತ್ತದೆ ಕಳೆದ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಈವಿಎಂ ಬಳಕೆ ಮಾಡಲಾಗಿತ್ತು. ಹಾಗಾಗಿ ಮೇ 25 ರ ನಂತರ ಜಿಬಿಎ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇದರಲ್ಲಿ ಈವಿಎಂ ಬಳಕೆಗೆ ಕೊಕ್ ನೀಡಿ ಬ್ಯಾಲೆಟ್ ಪೇಪರ್ ಬಳಸಲಾಗುತ್ತದೆ.
ಈ ಕುರಿತು ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದ್ದು, ನಮ್ಮದು ಸ್ವತಂತ್ರ ಸಂಸ್ಥೆ. ಇದು ನಮ್ಮದೇ ಸ್ವಂತ ನಿರ್ಧಾರ ಎಂದು ಚುನಾವಣಾ ಆಯೋಗ ತಿಳಿಸಿದೆ. ಇವಿಎಂ ಬ್ಯಾಲೆಟ್ ಪೇಪರ್ ಎರಡರಲ್ಲೂ ದೋಷವಿಲ್ಲ ಸುಪ್ರೀಂ ಕೋರ್ಟ್ ಬ್ಯಾಲೆಟ್ ಪೇಪರ್ ಬಳಸಬೇಡಿ ಎಂದಿಲ್ಲ ನಾವ್ಯಾಕೆ ಬ್ಯಾಲೆಟ್ ಪೇಪರ್ ಬಳಸಬಾರದು ಎಂದು ಚುನಾವಣಾ ಆಯೋಗ ಪ್ರಶ್ನಿಸಿದೆ.








