ಬೆಳಗಾವಿ : ಬಂಧಿಸಲು ತೆರಳಿದ್ದಾಗ ಕಾನ್ಸ್ಟೇಬಲ್ ಗೆ ಚಾಕು ಇರಿದು ಪರಾರಿ ಯಾಗಲು ಯತ್ನಿಸಿದ ದರೋಡೆ ಹಾಗು ಗ್ಯಾಂಗ್ ರೇಪ್ ಆರೋಪಿ ಕಾಲಿಗೆ ಪೊಲೀಸರಿಂದ ಫೈರಿಂಗ್ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಹೊರವಲಯದಲ್ಲಿ ನಡೆದಿದೆ. ರಮೇಶ್ ಕಿಲ್ಲಾರ್ ಕಾಲಿಗೆ ಕಿತ್ತೂರು ಠಾಣೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.
ಬಂಧಿಸಲು ತೆರಳಿದ್ದಾಗ ಪಿಸಿಗೆ ಚಾಕು ಇರಿದು ಪರಾರಿ ಯಾಗಲು ಯತ್ನಿಸಿದ್ದಾನೆ. ಕಾನ್ಸ್ಟೇಬಲ್ ಷರೀಫ್ ಗೆ ಚಾಕು ಇರಿದು ರಮೇಶ್ ಪರಾರಿಯಾಗಲು ಯತ್ನಿಸಿದ್ದಾನೆ. ಆತ್ಮ ರಕ್ಷಣೆಗಾಗಿ ಪಿಎಸ್ಐ ಪ್ರವೀಣ್ ಗಂಗೊಳ್ಳಿ ರಮೇಶ್ ಮೇಲೆ ಫೈರಿಂಗ್ ನಡೆಸಿದ್ದಾರೆ ಗಾಯಗೊಂಡ ಆರೋಪಿ ರಮೇಶ್ ಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ದರೋಡೆ ಸಾಮೂಹಿಕ ಅತ್ಯಾಚಾರ ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರ ಸೇರಿದಂತೆ ಹಲವು ಪ್ರಕರಣಗಳಲ್ಲಿ ರಮೇಶ್ ಕಿಲ್ಲರ್ ಭಾಗಿಯಾಗಿದ್ದ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.