ಬಳ್ಳಾರಿ : ಇತ್ತೀಚಿಗೆ ಬಸ್ ಚಾಲಕರು ಹಾಗೂ ನಿರ್ವಾಹಕರ ಮೇಲೆ ಪ್ರಯಾಣಿಕರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಇದೀಗ ಬಳ್ಳಾರಿ ಜಿಲ್ಲೆಯ ಕುರುಡುಗೋಡಿನಲ್ಲಿ ಕೇವಲ ಬಸ್ ಹತ್ತುವ ವಿಚಾರಕ್ಕೆ ಕೆಕೆಆರ್‌ಟಿಸಿ ಬಸ್ ಚಾಲಕನ ಮೇಲೆ ಪುಂಡನೊಬ್ಬ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಹೌದು ಬಸ್ ಹತ್ತುವ ವಿಚಾರಕ್ಕೆ ಚಾಲಕ ಹಾಗೂ ಪುಂಡ ಯುವಕನ ನಡುವೆ ಗಲಾಟೆ ನಡೆದಿದೆ.ಗಲಾಟೆಯು ತೀವ್ರ ಸ್ವರೂಪ ಪಡೆದು, ಈ ವೇಳೆ 52 ವರ್ಷದ ಚಾಲಕನ ಮೇಲೆ ಪುಂಡ ಯುವಕ ಎರಗಿದ್ದಾನೆ. ಬೀಮಣ್ಣ ಎಂಬ ಚಾಲಕ ಮೇಲೆ ಬಸ್ ನಿಲ್ದಾಣದಲ್ಲಿ ಹಲ್ಲೆ ಮಾಡಿದ್ದಾನೆ.
ಪುಂಡನ ಈ ಒಂದು ದುರ್ವರ್ತನೆ ಕಂಡು ಸಾರಿಗೆ ಸಿಬ್ಬಂದಿಗಳು ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇನ್ನು ಹಲಗೆ ಒಳಗಾದಂತಹ ಬಸ್ ಚಾಲಕ ಭಿಮಣ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಒಂದು ಘಟನೆ ಸಂಬಂಧಿಸಿದಂತೆ ಕುರುಡುಗೋಡು ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ದಾಖಲಾಗಿದೆ.