ಅಫಜಲಪುರ : ಬಸ್ ನಿಲ್ದಾಣದಲ್ಲಿ ಹಾರ್ನ್ ಮಾಡಿದಕ್ಕೆ ಕೆಕೆ ಆರ್ ಟಿಸಿ ಬಸ್ ಚಾಲಕನ ಮೇಲೆ ದುಷ್ಕರ್ಮಿಯೊಬ್ಬ ಬ್ಲೇಡ್ ನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಕೆಕೆ ಆರ್ ಟಿಸಿ ಬಸ್ ಚಾಲಕ ಸುರೇಶ್ ಗಾಯೊಂಡ ಚಾಲಕನಾಗಿದ್ದು, ಬಸ್ ನಿಲ್ದಾಣಕ್ಕೆ ಬಂದ ವೇಳೆ ಹಾರ್ನ್ ಮಾಡಿದ ವೇಳೆ ದುಷ್ಕರ್ಮಿಯೊಬ್ಬ ಬ್ಲೇಡ್ ನಿಂದ ಹಲ್ಲೆ ಮಾಡಿದ್ದಾನೆ.
ಮುಂಬೈ-ಅಫಜಲಪುರ ಕೆಕೆಆರ್ ಟಿಸಿ ಬಸ್ ನಿಲ್ದಾಣದ ಚಾಲಕ ಸುರೇಶ್ ಬಸ್ ನಿಲ್ದಾಣ ಪ್ರವೇಶಿಸುವಾಗ ಹಾರ್ನ್ ಹಾಕಿದ್ದಾರೆ. ಈ ವೇಳೆ ದುಷ್ಕರ್ಮಿಯೊಬ್ಬ ಬ್ಲೇಡ್ ನಿಂದ ಹಲ್ಲೆ ಮಾಡಲಾಗಿದೆ. ಚಾಲಕ ಸುರೇಶ್ ಅವರನ್ನು ಅಫಜಲಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.