ದಾವಣಗೆರೆ : ಈಗಾಗಲೇ ಕೋಡಿ ಶ್ರೀಗಳು ಉತ್ತರ ಕರ್ನಾಟಕ ಭಾಗದ ಸಚಿವರಾದಂತಹ ಎಂ ಬಿ ಪಾಟೀಲ್ ರಿಗೆ ಮುಖ್ಯಮಂತ್ರಿ ಆಗುವ ಯೋಗ ಇದೆ ಎಂದು ಭವಿಷ್ಯ ನುಡಿದಿದ್ದಾರೆ. ಇದರ ಬೆನ್ನಲ್ಲೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಡಿಸೆಂಬರ್ ಒಳಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಅಕಸ್ಮಾತ್ ಆಗದಿದ್ದರೆ ನನ್ನನ್ನು ಬಂದು ಕೇಳಿ ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ಡಿಸೆಂಬರ್ ಒಳಗೆ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಆಗದಿದ್ದರೆ ನನ್ನನ್ನು ಬಂದು ಕೇಳಿ. ಈಗಾಗಲೇ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಹೇಳಿದ್ದೇನೆ. ತೆನೆ ಹಾಗಾಗಿ ಮುಂದಿನ ಡಿಸೆಂಬರ್ ಒಳಗಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಅಕಸ್ಮಾತ್ ಆಗದಿದ್ದರೆ ಆಗ ನನ್ನನ್ನು ಬಂದು ಕೇಳಿ ಎಂದು ಡಿಕೆ ಶಿವಕುಮಾರ್ ಪರವಾಗಿ ಬ್ಯಾಟಿಂಗ್ ಬೀಸಿದ್ದಾರೆ.
ಡಿಸೆಂಬರ್ ಒಳಗೆ ಸಿಎಂ ಬದಲಾವಣೆಯಾಗ್ತಾರೆ, ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಗ್ತಾರೆ.ಇಷ್ಟೇ ಈಗ ಸದ್ಯಕ್ಕೆ ಏನು ಮಾತನಾಡಲ್ಲ, ಡಿಸೆಂಬರ್‌ವರೆಗೂ ಕಾದು ನೋಡಿ ಎಂದು ಹೇಳಿದ್ದಾರೆ.ಸದ್ಯ ಕೆಪಿಸಿಸಿ ಅಧ್ಯಕ್ಷ ಹುದ್ದೆ ಖಾಲಿ ಇಲ್ಲ. ಖಾಲಿಯಾದ ಮೇಲೆ ಯಾರಿಗೆ ಅರ್ಹತೆ ಇರುತ್ತೆ ಅವರು ಆಗ್ತಾರೆ ಎಂದರು.