ಕಲಬುರ್ಗಿ : ದೇಶದ 28 ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ದೆಹಲಿ ಮೂಲದ ರಾಜೀವ್ ಸಿಂಗ್ ಆರೋರ ಎಂಬಾತನನ್ನು ಇದೀಗ ಕಲಬುರ್ಗಿಯ ಸೆನ್ ಠಾಣೆ ಪೊಲೀಸರು ದೆಹಲಿಯ ದ್ವಾರಕಮೋಡ್ ರಾಮ ಪಾರ್ಕ್ ಅಪಾರ್ಟ್ಮೆಂಟ್ ನಲ್ಲಿ ಅರೆಸ್ಟ್ ಮಾಡಿದ್ದಾರೆ. ನಕಲಿ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ಅಂಕಪಟ್ಟಿ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, KSOU ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ. ದೆಹಲಿ ಮೂಲದ ರಾಜೀವ್ ಸಿಂಗ್ ಆರೋಪಿಯನ್ನು ಇದೀಗ ಕಲಬುರ್ಗಿಯ ಸೆನ್ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಬಂಧಿತ ರಾಜೀವ್ ಸಿಂಗ್ ಬಳಿ 522 ನಕಲಿ ಅಂಕಪಟ್ಟಿ ವಶಕ್ಕೆ ಪಡೆದ ಪೊಲೀಸರು, ನಕಲಿ ಅಂಕಪಟ್ಟಿಸಿದ ಪಡಿಸಲು 1626 ಖಾಲಿ ಪೇಪರ್ ಗಳನ್ನು ಇದೆ ವೇಳೆ ವಶಕ್ಕೆ ಪಡಿಸಿಕೊಳ್ಳಲಾಯಿತು.
ವಿವಿಧ ವಿಶ್ವವಿದ್ಯಾಲಯಗಳ 122 ನಕಲಿ ಸೀಲ್ಗಳು, 36 ಮೊಬೈಲ್, ಎರಡು ಲ್ಯಾಪ್ಟಾಪ್, 1 ಪ್ರಿಂಟರ್, ಎಟಿಎಂ ಕಾರ್ಡ್ ಗಳು, 123 ನಕಲಿ ಗುರುತಿನ ಚೀಟಿಗಳನ್ನು ವಶಕ್ಕೆ ಪಡೆಯಲಾಯಿತು. ರಾಜೀವ್ ಸಿಂಗ್ ಆರೋರ ಹೆಸರಿನಲ್ಲಿದ್ದ 85 ಬ್ಯಾಂಕ್ ಖಾತೆಗಳು ಪತ್ತೆಯಾಗಿವೆ.ಅರೆಸ್ಟ್ ಆಗಿರುವಂತಹ ದೆಹಲಿ ಮೂಲದ ರಾಜೀವ್ ಸಿಂಗ್ ಆರೋರ ದೇಶದ 28 ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ನಿರುದ್ಯೋಗ ಯುವಕ ಯುವತಿಯನ್ನು ಗುರುತಿಸಿ ಅವರಿಗೆ ಮಾರಾಟ ಮಾಡುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ.
ಪಿಯುಸಿ ಡಿಪ್ಲೋಮಾ ಇನ್ ಎಜುಕೇಶನ್, ಡಾಕ್ಟರ್ ಆಫ್ ಫಿಲಾಸಫಿ ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಬಿ ಟೆಕ್, ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಕಲಿ ಅಂಕಪಟ್ಟಿಗಳನ್ನು ಮಾರಾಟ ಮಾಡುತ್ತಿದ್ದ. ಕಳೆದ 7 8 ವರ್ಷಗಳಿಂದ ನಕಲಿ ಅಂಕಪಟ್ಟಿ ದಂತೆ ನಡೆಸುತ್ತಿದ್ದ. ರಾಜೀವ್ ಸಿಂಗ್ ದೆಹಲಿ ಮೂಲದ ರಾಜೀವ್ ಸಿಂಗ್ ನನ್ನು ಬಂಧಿಸಿ ಕಲಬುರ್ಗಿ ಸೆನ್ ಠಾಣೆ ಪೊಲೀಸರು ಇದೀಗ ವಿಚಾರಣೆ ನಡೆಸುತ್ತಿದ್ದಾರೆ.