ಬೆಂಗಳೂರು : ಮುಡಾದಲ್ಲಿ 14 ಸೈಟ್ ಗಳನ್ನು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಿಂತಿರುಗಿಸಿದ್ದಾರೆ. ಇದರ ಮಧ್ಯ ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬಸ್ಥರು ಟ್ರಸ್ಟಿಗಳಾಗಿರುವ ಸಿದ್ದಾರ್ಥ್ ವಿಹಾರ ಟ್ರಸ್ಟ್ ಸಹ 5 ಎಕರೆ ವಿಸ್ತೀರ್ಣದ ಸಿಎ ನಿವೇಶವನ್ನು ವಾಪಸ್ ನೀಡಲು ತೀರ್ಮಾನಿಸಿದೆ.
ಹೌದು ಈ ಕುರಿತು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿ ತಮ್ಮ ಕುಟುಂಬದ ಟ್ರಸ್ಟ್ಗೆ ನೀಡಲಾಗಿದ್ದ ಸೈಟ್ ಹಿಂದಿರುಗಿಸುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.ಕೆಐಎಡಿಬಿ ಹಂಚಿಕೆ ಮಾಡಿದ್ದ ಭೂಮಿ ವಾಪಸ್ಗೆ ನಿರ್ಧರಿಸಲಾಗಿದೆ. ಕಾನೂನು ಬಾಹಿರವಾಗಿ ಸೈಟ್ ಹಂಚಿಕೆಯಾಗಿದೆ ಎಂಬ ಆರೋಪವಿತ್ತು. ಈ ವಿಚಾರದಲ್ಲಿ ಟ್ರಸ್ಟ್ ಅಧ್ಯಕ್ಷ ರಾಹುಲ್ಗೆ ಮಾಹಿತಿ ಇರಲಿಲ್ಲ ಅನಿಸುತ್ತೆ.
ನಮ್ಮ ಕುಟುಂಬದಲ್ಲಿ ಮೂವರು ಅಷ್ಟೇ ರಾಜಕೀಯದಲ್ಲಿ ಇದ್ದೇವೆ. ನಮ್ಮ ಅಣ್ಣ ಅವರು ಮೃದು ಸ್ವಭಾವದವರು. ಅವರಿಂದ ಕುಟುಂಬದ ಸದಸ್ಯರರಿಗೆ ಹಿಂಸೆ ಆಗುತ್ತಿದೆ ಎಂದು ನೊಂದಿದ್ದಾರೆ . ಹೀಗಾಗಿ ಸೆಪ್ಟೆಂಬರ್ 29 ರಂದು ಅವರು ಕೆಐಎಡಿಬಿಗೆ ಪತ್ರ ಬರೆದಿದ್ದಾರೆ. ಸೈಟ್ ಕೊಟ್ಟಿರೋದನ್ನ ಕಾನೂನಾತ್ಮಕ ವಾಗಿ ಮರಳಿ ನೀಡುತ್ತಿದ್ದೇವೆ ಎಂದು ಪತ್ರ ಬರೆದಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಸಿಎ ಸೈಟ್ ತೆಗೆದುಕೊಳ್ಳುವ ಬಗ್ಗೆ ರಾಹುಲ್ ಖರ್ಗ ನಿರ್ಧಾರ ಮಾಡಿದ್ದರು. ಈಗ ಅವರೇ ಇಷ್ಟ ಇಲ್ಲ ಅಂತ ಮರಳಿ ನೀಡಿದ್ದಾರೆ. ರಾಹುಲ್ ಖರ್ಗೆ ಯಾರು ಅಂತ ಯಾರಿಗೂ ಗೊತ್ತಿಲ್ಲ. ಕಷ್ಟ ಪಟ್ಟು ರಾಹುಲ್ ಖರ್ಗೆ ಯುಪಿಎಸ್ ಇ ಪಾಸ್ ಆಗಿದ್ದಾರೆ. ಕಷ್ಟ ಪಟ್ಟು ನಮ್ಮ ಕುಟುಂಬದಲ್ಲಿ ರಾಹುಲ್ ಖರ್ಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಇದೊಂದು ರಾಜಕೀಯ ಆರೋಪ ಅಷ್ಟೇ ಎಂದರು.
ಟ್ರಸ್ಟ್ ಅಧ್ಯಕ್ಷ ರಾಹುಲ್ ಖರ್ಗೆ ಅವರಿಗೆ ಹೆಚ್ಚು ಅರಿವು ಇರಲಿಲ್ಲ ಅನ್ಸುತ್ತೆ. ಅವರಿಗೆ ಕೇಂದ್ರದಿಂದ ಸಾಕಷ್ಟು ಅವಾರ್ಡ್ ಸಿಕ್ಕಿದೆ. ಯುಪಿಎಸ್ ಇ ನಲ್ಲೂ ರ್ಯಾಂಕ್ ಬಂದಿದ್ರು. ಯುರೋಸ್ಪೇಸ್ ನಲ್ಲಿ ಜಾಗ ಬೇಕು ಅಂತ ಅರ್ಜಿ ಹಾಕಿದ್ದರು. ಅದರ ಅನ್ವಯ ಅವರಿಗೆ ಸೈಟ್ ಅಲರ್ಟ್ ಆಗಿದೆ. ಸಂಪೂರ್ಣ ದಾಖಲೆ ಆಧಾರದ ಮೇಲೆ ಸೈಟ್ ಸಿಕ್ಕಿದೆ. ಇಲ್ಲಿ ತರಾತುರಿಯಲ್ಲಿ ಏನು ಆಗಿಲ್ಲ ಎಂದು ತಿಳಿಸಿದರು.