Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : `KEA’ಯಿಂದ `UGCET-2026 ಫಲಿತಾಂಶ’ ಪ್ರಕಟ : ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್‌ ಇಲ್ಲಿದೆ | UGCET-2026 Result

BREAKING : ಕರ್ನಾಟಕ `UG-CET’ ಪರೀಕ್ಷೆ ಫಲಿತಾಂಶ ಪ್ರಕಟ : ಇಲ್ಲಿದೆ ಟಾಪರ್ ಗಳ ಸಂಪೂರ್ಣ ಪಟ್ಟಿ | KCET Result 2026

BREAKING : ‘KEA’ ಇಂದ 2026 ನೇ ಸಾಲಿನ ‘UG-CET’ ಫಲಿತಾಂಶ ಪ್ರಕಟ | UG-CET Result 2026

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಕರ್ನಾಟಕ `UG-CET’ ಪರೀಕ್ಷೆ ಫಲಿತಾಂಶ ಪ್ರಕಟ : ಇಲ್ಲಿದೆ ಟಾಪರ್ ಗಳ ಸಂಪೂರ್ಣ ಪಟ್ಟಿ | KCET Result 2026
KARNATAKA

BREAKING : ಕರ್ನಾಟಕ `UG-CET’ ಪರೀಕ್ಷೆ ಫಲಿತಾಂಶ ಪ್ರಕಟ : ಇಲ್ಲಿದೆ ಟಾಪರ್ ಗಳ ಸಂಪೂರ್ಣ ಪಟ್ಟಿ | KCET Result 2026

By kannadanewsnow57

ಬೆಂಗಳೂರು: ಸಾವಿರಾರು ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (UGCET/K-CET 2026) ಫಲಿತಾಂಶ ಕೊನೆಗೂ ಪ್ರಕಟವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು ಅಧಿಕೃತವಾಗಿ ಫಲಿತಾಂಶವನ್ನು ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಮಧ್ಯಾಹ್ನ 2 ಗಂಟೆಯಿಂದ ತಮ್ಮ ಅಂಕಗಳು ಹಾಗೂ ರ್ಯಾಂ)ಕ್‌ ಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) 2026ನೇ ಸಾಲಿನ ಯುಜಿಸಿಇಟಿ (UGCET) ಪರೀಕ್ಷೆಯ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದೆ. ಈ ಬಾರಿ ಒಟ್ಟು 3,30,646 ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಅವರಲ್ಲಿ 3,09,014 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಒಟ್ಟು 2,92,782 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗಳಾದ [https://keaonline.karnataka.gov.in/ugcet_2026_results/](https://keaonline.karnataka.gov.in/ugcet_2026_results/) ಅಥವಾ [https://cetonline.karnataka.gov.in/kea/](https://cetonline.karnataka.gov.in/kea/) ಮೂಲಕ ವೀಕ್ಷಿಸಬಹುದಾಗಿದೆ.

ಪ್ರಮುಖ ಕೋರ್ಸ್‌ಗಳಿಗೆ ಅರ್ಹತೆ ಪಡೆದವರ ವಿವರ

ಇಂಜಿನಿಯರಿಂಗ್ (Engg): 2,82,603

ಬಿ.ಎಸ್ಸಿ ಕೃಷಿ (B.Sc. Agriculture): 2,09,220

ವೆಟರಿನರಿ (B.V.Sc): 2,12,909

ಬಿ-ಫಾರ್ಮಾ (B-Pharma): 2,86,609

ಫಾರ್ಮಾ-ಡಿ (Pharma-D): 2,86,965

ಬಿ.ಎಸ್ಸಿ ನರ್ಸಿಂಗ್ (B.Sc Nursing): 2,18,785

ವಿವಿಧ ವಿಭಾಗಗಳ ಟಾಪರ್‌ಗಳ ಪಟ್ಟಿ (Top Rank Holders)

ಇಂಜಿನಿಯರಿಂಗ್ ವಿಭಾಗ:

ತನಿಷಾ ಕಾರ್ತಿಕ್ (ಆರ್.ವಿ. ಪಿಯು ಕಾಲೇಜು, ಜಯನಗರ, ಬೆಂಗಳೂರು) – 99.44%

ಸೃಜನ್ ಬಿ. ಎಸ್ (ಕೆ.ಎಂ.ಡಬ್ಲ್ಯೂ.ಎ ಪಿಯು ಕಾಲೇಜು, ಬೆಂಗಳೂರು) – 99.16%

ನಿನಾದ್ ವಸಿಷ್ಠ (ಆರ್.ವಿ. ಪಿಯು ಕಾಲೇಜು, ಜಯನಗರ, ಬೆಂಗಳೂರು) – 98.88%

ವೆಟರಿನರಿ, ಬಿ.ಎಸ್ಸಿ ನರ್ಸಿಂಗ್, ಬಿ.ಫಾರ್ಮಾ ಮತ್ತು ಫಾರ್ಮಾ-ಡಿ ವಿಭಾಗಗಳು:

ಈ ಎಲ್ಲಾ ವಿಭಾಗಗಳಲ್ಲಿ ಬೆಂಗಳೂರಿನ ಬೇಸ್ ಪಿಯು ಕಾಲೇಜಿನ ನಯನಾ ಗೋಪಿ ಹಾಗೂ ದಾವಣಗೆರೆಯ ಸರ್ ಎಂ.ವಿ. ಪಿಯು ಕಾಲೇಜಿನ ಅಮೂಲ್ಯ ಎಸ್. ಅವರು 100% ಮೆರಿಟ್ ಅಂಕಗಳೊಂದಿಗೆ ಜಂಟಿ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ.

ಕೃಷಿ ವಿಜ್ಞಾನ ವಿಭಾಗ (Farm Sciences):  

ನಿನಾದ್ ವಸಿಷ್ಠ (ಆರ್.ವಿ. ಪಿಯು ಕಾಲೇಜು, ಬೆಂಗಳೂರು) – 98.75%

ಅನ್ಮೋಲ್ ಪ್ರಭು (ಅರ್ಜುನ ಸೈನ್ಸ್ ಪಿಯು ಕಾಲೇಜು, ಧಾರವಾಡ) – 98.58%

ಸಮಯ್ ಎ. ಎಸ್ (ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು) – 98.41%

ಪಾರದರ್ಶಕತೆ ಮತ್ತು ತಾಂತ್ರಿಕ ನಾವೀನ್ಯತೆ

ಪರೀಕ್ಷಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಕೆಇಎ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ:

ಮುಖಚಹರೆ ಪತ್ತೆ (Face Recognition): ವಿದ್ಯಾರ್ಥಿ ಆನ್ಲೈನ್ ಅರ್ಜಿಯಲ್ಲಿ ಸಲ್ಲಿಸಿದ ಫೋಟೋ ಆಧಾರದ ಮೇಲೆ, ಕೆಇಎ ಐಟಿ ತಂಡ ಅಭಿವೃದ್ಧಿಪಡಿಸಿದ ಮೊಬೈಲ್ ಆಪ್ ಮೂಲಕ ಮುಖಚಹರೆ ಪರಿಶೀಲಿಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗಿತ್ತು.

ಲೈವ್ ವೆಬ್ ಕಾಸ್ಟಿಂಗ್: ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಿ, ಜಿಲ್ಲಾ ಕೇಂದ್ರಗಳಲ್ಲಿ ಲೈವ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು ಹಾಗೂ ಆಯ್ದ ಕೇಂದ್ರಗಳಲ್ಲಿ ಜಾಮರ್‌ಗಳನ್ನು ಅಳವಡಿಸಲಾಗಿತ್ತು.

ಓಎಂಆರ್ ಶೀಟ್ ಅಪ್‌ಲೋಡ್: ಎಲ್ಲಾ ವಿದ್ಯಾರ್ಥಿಗಳ ಒಟ್ಟು 11,51,367 ಓಎಂಆರ್ ಶೀಟ್‌ಗಳನ್ನು ಕೇವಲ ಐದು ದಿನಗಳಲ್ಲಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿದೆ.

ಕೃಪಾಂಕ ಮತ್ತು ಪರಿಷ್ಕೃತ ಕೀ ಉತ್ತರಗಳು

ಮೇ 10, 2026 ರಂದು ಪರಿಷ್ಕೃತ ಸರಿ ಉತ್ತರಗಳನ್ನು ಪ್ರಕಟಿಸಲಾಗಿದ್ದು, ಅದರ ವಿವರ ಹೀಗಿದೆ:

ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ: ತಲಾ ಒಂದು ಪ್ರಶ್ನೆಗೆ ಮಾತ್ರ ಕೃಪಾಂಕ (Grace Mark) ನೀಡಲಾಗಿದೆ.

ಜೀವಶಾಸ್ತ್ರ: ಒಂದು ಪ್ರಶ್ನೆಗೆ ಎರಡು ಸರಿ ಉತ್ತರಗಳನ್ನು (ಆಪ್ಷನ್ 2 ಅಥವಾ 3) ಮಾನ್ಯ ಮಾಡಲಾಗಿದೆ.

ಗಣಿತ: ಯಾವುದೇ ಕೃಪಾಂಕವನ್ನು ನೀಡಲಾಗಿಲ್ಲ.

ಮುಂದಿನ ಪ್ರಕ್ರಿಯೆ: ದಾಖಲಾತಿ ಪರಿಶೀಲನೆ ಮತ್ತು ಆಪ್ಷನ್ ಎಂಟ್ರಿ

ಈ ಬಾರಿ ಸಿಇಟಿ ಫಲಿತಾಂಶಕ್ಕೂ ಮುನ್ನವೇ ಆನ್‌ಲೈನ್ ದಾಖಲೆ ಪರಿಶೀಲನೆಯನ್ನು SATS ಮತ್ತು R D ದತ್ತಾಂಶದ ಆಧಾರದ ಮೇಲೆ ಯಶಸ್ವಿಯಾಗಿ ನಡೆಸಲಾಗಿದೆ. ಆನ್‌ಲೈನ್‌ನಲ್ಲಿ ಪರಿಶೀಲನೆ ಆಗದ ಅಭ್ಯರ್ಥಿಗಳಿಗೆ ಅವರವರ ಪಿಯು ಕಾಲೇಜುಗಳಲ್ಲೇ ದಾಖಲೆ ಪರಿಶೀಲನೆ ನಡೆಸಲು ಅವಕಾಶ ಕಲ್ಪಿಸಲಾಗಿತ್ತು.

ಕೋರ್ಸ್ ಆಯ್ಕೆಯ ಪ್ರಮುಖ ಪ್ರಕ್ರಿಯೆಯಾದ ‘ಆಪ್ಷನ್ ಎಂಟ್ರಿ’ (Option Entry) ಜೂನ್ 8, 2026 ರಿಂದ ಪ್ರಾರಂಭವಾಗಲಿದೆ ಎಂದು ಪ್ರಾಧಿಕಾರ ತಿಳಿಸಿದೆ

BREAKING: Karnataka `UG-CET’ exam results declared: Here is the complete list of toppers | KCET Result 2026
Share. Facebook Twitter LinkedIn WhatsApp Email

Related Posts

BREAKING : `KEA’ಯಿಂದ `UGCET-2026 ಫಲಿತಾಂಶ’ ಪ್ರಕಟ : ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್‌ ಇಲ್ಲಿದೆ | UGCET-2026 Result

2 Mins Read

BREAKING : ‘KEA’ ಇಂದ 2026 ನೇ ಸಾಲಿನ ‘UG-CET’ ಫಲಿತಾಂಶ ಪ್ರಕಟ | UG-CET Result 2026

2 Mins Read

BIG NEWS : ರಾಜೀನಾಮೆ ಹಿಂಪಡೆಯಲು ಸಿಎಂ ಮತ್ತು ಸುರ್ಜೆವಾಲಾ ಮನವಿ ಮಾಡಿದ್ದಾರೆ : ರಾಮಲಿಂಗಾರೆಡ್ಡಿ ಹೇಳಿಕೆ

1 Min Read
Recent News

BREAKING : `KEA’ಯಿಂದ `UGCET-2026 ಫಲಿತಾಂಶ’ ಪ್ರಕಟ : ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್‌ ಇಲ್ಲಿದೆ | UGCET-2026 Result

BREAKING : ಕರ್ನಾಟಕ `UG-CET’ ಪರೀಕ್ಷೆ ಫಲಿತಾಂಶ ಪ್ರಕಟ : ಇಲ್ಲಿದೆ ಟಾಪರ್ ಗಳ ಸಂಪೂರ್ಣ ಪಟ್ಟಿ | KCET Result 2026

BREAKING : ‘KEA’ ಇಂದ 2026 ನೇ ಸಾಲಿನ ‘UG-CET’ ಫಲಿತಾಂಶ ಪ್ರಕಟ | UG-CET Result 2026

BIG NEWS : ರಾಜೀನಾಮೆ ಹಿಂಪಡೆಯಲು ಸಿಎಂ ಮತ್ತು ಸುರ್ಜೆವಾಲಾ ಮನವಿ ಮಾಡಿದ್ದಾರೆ : ರಾಮಲಿಂಗಾರೆಡ್ಡಿ ಹೇಳಿಕೆ

State News
KARNATAKA

BREAKING : `KEA’ಯಿಂದ `UGCET-2026 ಫಲಿತಾಂಶ’ ಪ್ರಕಟ : ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್‌ ಇಲ್ಲಿದೆ | UGCET-2026 Result

By kannadanewsnow57 KARNATAKA 2 Mins Read

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗಿದ್ದ 2026ನೇ ಸಾಲಿನ ಸಾಮಾನ್ಯ…

BREAKING : ಕರ್ನಾಟಕ `UG-CET’ ಪರೀಕ್ಷೆ ಫಲಿತಾಂಶ ಪ್ರಕಟ : ಇಲ್ಲಿದೆ ಟಾಪರ್ ಗಳ ಸಂಪೂರ್ಣ ಪಟ್ಟಿ | KCET Result 2026

BREAKING : ‘KEA’ ಇಂದ 2026 ನೇ ಸಾಲಿನ ‘UG-CET’ ಫಲಿತಾಂಶ ಪ್ರಕಟ | UG-CET Result 2026

BIG NEWS : ರಾಜೀನಾಮೆ ಹಿಂಪಡೆಯಲು ಸಿಎಂ ಮತ್ತು ಸುರ್ಜೆವಾಲಾ ಮನವಿ ಮಾಡಿದ್ದಾರೆ : ರಾಮಲಿಂಗಾರೆಡ್ಡಿ ಹೇಳಿಕೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.