ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸ ವೇಳಾಪಟ್ಟಿಯಂತೆ ಏಪ್ರಿಲ್ 25ರಿಂದ ಮೇ 8ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಹಾಗೂ ಮೇ 18ರಿಂದ ಮೇ 25ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯಲಿವೆ.
ದ್ವಿತೀಯ ಪಿಯುಸಿ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ ಹೀಗಿದೆ:
| ದಿನಾಂಕ | ದಿನ | ವಿಷಯಗಳು (ಬೆಳಿಗ್ಗೆ 10:00 – 1:00) |
| 25/04/2026 | ಶನಿವಾರ | ಕನ್ನಡ, ಅರೇಬಿಕ್ |
| 27/04/2026 | ಸೋಮವಾರ | ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ, ರಸಾಯನಶಾಸ್ತ್ರ |
| 28/04/2026 | ಮಂಗಳವಾರ | ಇಂಗ್ಲಿಷ್ |
| 29/04/2026 | ಬುಧವಾರ | ವ್ಯವಹಾರ ಅಧ್ಯಯನ, ಭೌತಶಾಸ್ತ್ರ, ಶಿಕ್ಷಣಶಾಸ್ತ್ರ |
| 30/04/2026 | ಗುರುವಾರ | ಅರ್ಥಶಾಸ್ತ್ರ, ಜೀವಶಾಸ್ತ್ರ |
| 02/05/2026 | ಶನಿವಾರ | ಇತಿಹಾಸ, ಗಣಿತ, ಗೃಹವಿಜ್ಞಾನ |
| 04/05/2026 | ಸೋಮವಾರ | ರಾಜ್ಯಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ |
| 05/05/2026 | ಮಂಗಳವಾರ | ಹಿಂದಿ |
| 06/05/2026 | ಬುಧವಾರ | ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ |
| 07/05/2026 | ಗುರುವಾರ | ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಭೂಗರ್ಭ ಶಾಸ್ತ್ರ, ಮೂಲ ಗಣಿತ |
| 08/05/2026 | ಶುಕ್ರವಾರ | ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ |
ಎಸ್.ಎಸ್.ಎಲ್.ಸಿ ಪರೀಕ್ಷೆ-2 ವೇಳಾಪಟ್ಟಿ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಪ್ರಕಟಣೆಯಂತೆ ಪರೀಕ್ಷೆಗಳು ಮೇ 18 ರಿಂದ ಮೇ 25ರ ವರೆಗೆ ನಡೆಯಲಿವೆ.
| ದಿನಾಂಕ | ವಿಷಯಗಳು |
| ಮೇ 18 | ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಇಂಗ್ಲಿಷ್, ಸಂಸ್ಕೃತ. |
| ಮೇ 19 | ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ. |
| ಮೇ 20 | ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ. |
| ಮೇ 21 | ಗಣಿತ, ಸಮಾಜಶಾಸ್ತ್ರ. |
| ಮೇ 22 |
ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ. ಜೊತೆಗೆ: ಮಾಹಿತಿ ತಂತ್ರಜ್ಞಾನ (IT), ರೀಟೇಲ್, ಆಟೋಮೊಬೈಲ್, ಬ್ಯೂಟಿ ಅಂಡ್ ವೆಲ್ನೆಸ್, ಅಪಾರೆಲ್ ಮೇಡ್ ಅಪ್ಸ್ ಮತ್ತು ಹೋಂ ಫರ್ನಿಷಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್ವೇರ್ ಪರೀಕ್ಷೆಗಳು. |
| ಮೇ 23 | ಸಮಾಜ ವಿಜ್ಞಾನ. |
| ಮೇ 25 | ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಪ್ರೋಗ್ರಾಮಿಂಗ್ ಇನ್ ANSI C, ಅರ್ಥಶಾಸ್ತ್ರ. |
ವಿಶೇಷ ಸೂಚನೆ: ಮೇ 8ರಂದು ಮಧ್ಯಾಹ್ನ 2:00 ರಿಂದ ಸಂಜೆ 4:15ರ ವರೆಗೆ ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ (IT), ರಿಟೇಲ್, ಆಟೋಮೊಬೈಲ್, ಆರೋಗ್ಯ ರಕ್ಷಣೆ ಸೇರಿದಂತೆ ವಿವಿಧ ವೃತ್ತಿಪರ ವಿಷಯಗಳ ಪರೀಕ್ಷೆಗಳು ನಡೆಯಲಿವೆ.
ರಜೆ ದಿನಗಳು:
ಏಪ್ರಿಲ್ 26, ಮೇ 1 (ಕಾರ್ಮಿಕರ ದಿನಾಚರಣೆ) ಮತ್ತು ಮೇ 3 ರಂದು ಪರೀಕ್ಷೆಗಳಿಗೆ ರಜೆ ಇರಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಪ್ಡೇಟ್ಗಳಿಗಾಗಿ ಮಂಡಲಿಯ ಅಧಿಕೃತ ವೆಬ್ಸೈಟ್ ಅನ್ನು ಗಮನಿಸಬಹುದಾಗಿದೆ ಎಂದು ಮಂಡಲಿಯ ಅಧ್ಯಕ್ಷರು ತಿಳಿಸಿದ್ದಾರೆ.









