Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯುಪಿಐ ಪೇಮೆಂಟ್‌ ವಿಫಲವಾಗಲು ಕೇವಲ ಬ್ಯಾಂಕ್ ಬ್ಯಾಲೆನ್ಸ್ ಕಾರಣವಲ್ಲ! ಅಸಲಿ ಕಾರಣಗಳು ಇಲ್ಲಿವೆ! | UPI payments fail

BREAKING: ಅಸ್ಸಾಂ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಮಸೂದೆ ಅಂಗೀಕಾರ!

KPCC ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ ರಾಜೀನಾಮೆ ಸಾಧ್ಯತೆ : ಅಧ್ಯಕ್ಷ ಸ್ಥಾನದ ಮೇಲೆ ಸತೀಶ್ ಜಾರಕಿಹೊಳಿ ಕಣ್ಣು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ‘ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-1’ರ ಫಲಿತಾಂಶ ಪ್ರಕಟ : ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ | Karnataka Second PUC Exam-1 Result
KARNATAKA

BREAKING: ‘ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-1’ರ ಫಲಿತಾಂಶ ಪ್ರಕಟ : ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ | Karnataka Second PUC Exam-1 Result

By kannadanewsnow57

ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಇಂದು (ಏಪ್ರಿಲ್ 09) ಪ್ರಕಟವಾಗಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಫಲಿತಾಂಶ ಲಭ್ಯವಿದ್ದು, ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ವೀಕ್ಷಿಸಬಹುದಾಗಿದೆ.

ಸುದ್ದಿಗೋಷ್ಠಿ ಮತ್ತು ಅಧಿಕೃತ ಪ್ರಕಟಣೆ

ಫಲಿತಾಂಶದ ಕುರಿತು ಹೆಚ್ಚಿನ ಮಾಹಿತಿ ನೀಡಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು ಸಂಜೆ 6 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ’ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ವೇಳೆ ಜಿಲ್ಲಾವಾರು ಸಾಧನೆ, ತೇರ್ಗಡೆ ಪ್ರಮಾಣ ಹಾಗೂ ಟಾಪರ್‌ಗಳ ವಿವರಗಳನ್ನು ಸಚಿವರು ಅಧಿಕೃತವಾಗಿ ಹಂಚಿಕೊಳ್ಳಲಿದ್ದಾರೆ.

2025–26ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ–1 ಫೆ.28ರಿಂದ ಆರಂಭವಾಗಿ ಮಾರ್ಚ್‌ 17ರವರೆಗೆ 1,217 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದವು. 5,174 ಕಾಲೇಜುಗಳ 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿ ಕೊಂಡಿದ್ದರು. ವಿಜ್ಞಾನ ವಿಷಯದಲ್ಲಿ 2.92 ಲಕ್ಷ, ವಾಣಿಜ್ಯದಲ್ಲಿ 2.11 ಲಕ್ಷ ಹಾಗೂ ಕಲಾ ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು.

ಫಲಿತಾಂಶ ವೀಕ್ಷಿಸುವುದು ಹೇಗೆ?

ವಿದ್ಯಾರ್ಥಿಗಳು ಈ ಕೆಳಗಿನ ವಿವಿಧ ವಿಧಾನಗಳ ಮೂಲಕ ತಮ್ಮ ಫಲಿತಾಂಶವನ್ನು ಸುಲಭವಾಗಿ ಪಡೆದುಕೊಳ್ಳಬಹುದು:

ಅಧಿಕೃತ ವೆಬ್‌ಸೈಟ್: https://karresults.nic.in ಲಿಂಕ್ ಮೂಲಕ ಫಲಿತಾಂಶ ವೀಕ್ಷಿಸಬಹುದು.

ಮೊಬೈಲ್ ಆಪ್: ಕರ್ನಾಟಕ ಒನ್ (KarnatakaOne) ಮೊಬೈಲ್ ಆಪ್ ಮೂಲಕವೂ ಮಾಹಿತಿ ಪಡೆಯಬಹುದು.

ನೇರ ಸಂದೇಶ: ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ಮಂಡಲಿಯಿಂದಲೇ ವಾಟ್ಸಾಪ್ (WhatsApp) ಅಥವಾ ಎಸ್‌ಎಂಎಸ್ (SMS) ಮೂಲಕ ಫಲಿತಾಂಶದ ವಿವರಗಳನ್ನು ರವಾನಿಸಲಾಗುವುದು.

ಕಾಲೇಜುಗಳಲ್ಲಿ ಲಭ್ಯತೆ: ಸಂಬಂಧಿತ ಕಾಲೇಜುಗಳಿಗೂ ಸಹ ದಿನಾಂಕ 09-04-2026ರ ಮಧ್ಯಾಹ್ನ 3.00 ಗಂಟೆಗೆ ಫಲಿತಾಂಶ ಪಟ್ಟಿಯನ್ನು ಲಭ್ಯಗೊಳಿಸಲಾಗುವುದು.

ಇತಿಹಾಸದಲ್ಲೇ ಮೊದಲ ಬಾರಿ: ಡಿಜಿಲಾಕರ್ ಮೂಲಕ ಅಂಕಪಟ್ಟಿ!

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಂಡಲಿಯು ಈ ವರ್ಷ ಒಂದು ವಿಶೇಷ ಕ್ರಮವನ್ನು ಕೈಗೊಂಡಿದೆ. ಇದೇ ಮೊದಲ ಬಾರಿಗೆ ಫಲಿತಾಂಶದ ಅಂಕಪಟ್ಟಿಯನ್ನು (Marks Card) ಡಿಜಿಲಾಕರ್ (DigiLocker) ಮೂಲಕವೂ ಲಭ್ಯಗೊಳಿಸಲಾಗುತ್ತಿದೆ.

ಡೌನ್‌ಲೋಡ್ ಸಮಯ: 09-04-2026ರ ಮಧ್ಯಾಹ್ನ 3.00 ಗಂಟೆಯಿಂದ ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಲಭ್ಯವಿರುತ್ತದೆ.

ವೆಬ್‌ಸೈಟ್: https://www.digilocker.gov.in ಬಳಸಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸಹಾಯ ವಿಡಿಯೋ: ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡುವ ಪ್ರಕ್ರಿಯೆಯನ್ನು ತಿಳಿದುಕೊಳ್ಳಲು ಮಂಡಲಿಯು ಈ ವಿಡಿಯೋ ಲಿಂಕ್ ಅನ್ನು ಒದಗಿಸಿದೆ: https://tinyurl.com/mw84wmh9.

ಈ ಬಾರಿಯ ವಿಶೇಷತೆಗಳೇನು?

ಈ ವರ್ಷ ವಿದ್ಯಾರ್ಥಿಗಳಿಗೆ ಫಲಿತಾಂಶ ಲಭ್ಯವಾಗುವಂತೆ ಮಾಡಲು ಮಂಡಳಿಯು ಹಲವಾರು ತಾಂತ್ರಿಕ ಸುಧಾರಣೆಗಳನ್ನು ತಂದಿದೆ:

ನೇರ ಸಂದೇಶ (SMS/WhatsApp): ವಿದ್ಯಾರ್ಥಿಗಳು ನೋಂದಾಯಿತ ಮೊಬೈಲ್ ಸಂಖ್ಯೆಗೆ ಮಂಡಳಿಯ ವತಿಯಿಂದ ನೇರವಾಗಿ ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಫಲಿತಾಂಶದ ಮಾಹಿತಿ ರವಾನೆಯಾಗಲಿದೆ.

ಡಿಜಿಟಲ್ ಅಂಕಪಟ್ಟಿ (DigiLocker): ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಫಲಿತಾಂಶ ಪ್ರಕಟವಾದ ತಕ್ಷಣವೇ ವಿದ್ಯಾರ್ಥಿಗಳು ತಮ್ಮ ಅಧಿಕೃತ ಅಂಕಪಟ್ಟಿಯನ್ನು ಡಿಜಿಲಾಕರ್ (DigiLocker) ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಅಂಕಪಟ್ಟಿ ಡೌನ್‌ಲೋಡ್ ಹೇಗೆ?

ವಿದ್ಯಾರ್ಥಿಗಳು www.digilocker.gov.in ಗೆ ಭೇಟಿ ನೀಡಬಹುದು ಅಥವಾ ಮಂಡಳಿ ಒದಗಿಸಿರುವ ಈ ವೀಡಿಯೊ ಲಿಂಕ್ https://tinyurl.com/mw84wmh9 ಬಳಸಿ ಪ್ರಕ್ರಿಯೆಯನ್ನು ತಿಳಿದುಕೊಳ್ಳಬಹುದು.

ದ್ವಿತೀಯ ಪಿಯು ಫಲಿತಾಂಶ ಇಂದು ಮಧ್ಯಾಹ್ನ 3ಕ್ಕೆ ಪ್ರಕಟವಾಗಲಿದೆ. ಇದೇ ಮೊದಲ ಬಾರಿ ಫಲಿತಾಂಶದ ಜತೆಗೇ ಅಂಕಪಟ್ಟಿಯೂ ಲಭ್ಯವಿದ್ದು, ಡಿಜಿಲಾಕರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಫಲಿತಾಂಶವನ್ನು https://t.co/23tVaGqRtv ಜಾಲತಾಣ ಹಾಗೂ ಕರ್ನಾಟಕ ಒನ್‌ ಮೊಬೈಲ್‌ ಆ್ಯಪ್‌ ಮೂಲಕ ಪಡೆಯುಬಹುದು. ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್… pic.twitter.com/LbEFFC1obA

— DIPR Karnataka (@KarnatakaVarthe) April 9, 2026

BREAKING: Karnataka Second PUC Exam-1 Result Declared: Girls dominate this time too
Share. Facebook Twitter LinkedIn WhatsApp Email

Related Posts

KPCC ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ ರಾಜೀನಾಮೆ ಸಾಧ್ಯತೆ : ಅಧ್ಯಕ್ಷ ಸ್ಥಾನದ ಮೇಲೆ ಸತೀಶ್ ಜಾರಕಿಹೊಳಿ ಕಣ್ಣು!

1 Min Read

BREAKING: ಕಾಂಗ್ರೆಸ್‌ನಲ್ಲಿ ಡಿಕೆಶಿ ಬಿಗ್ ಸರ್ಜರಿ: ನಿಕೇತ್ ರಾಜ್, ಭಾವನಾ ರಾಮಣ್ಣ ಸೇರಿ ಹಲವು ಕೆಪಿಸಿಸಿ ಪದಾಧಿಕಾರಿಗಳು ಹುದ್ದೆಯಿಂದ ವಜಾ!

2 Mins Read

BIG NEWS: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ 13,000 ಜನರಿಗೆ ಕೋಟ್ಯಂತರ ವಂಚನೆ: ತಮಿಳುನಾಡು ಮೂಲದ ಕಿಂಗ್‌ಪಿನ್ ದಾವಣಗೆರೆಯಲ್ಲಿ ಅರೆಸ್ಟ್

2 Mins Read
Recent News

ಯುಪಿಐ ಪೇಮೆಂಟ್‌ ವಿಫಲವಾಗಲು ಕೇವಲ ಬ್ಯಾಂಕ್ ಬ್ಯಾಲೆನ್ಸ್ ಕಾರಣವಲ್ಲ! ಅಸಲಿ ಕಾರಣಗಳು ಇಲ್ಲಿವೆ! | UPI payments fail

BREAKING: ಅಸ್ಸಾಂ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಮಸೂದೆ ಅಂಗೀಕಾರ!

KPCC ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ ರಾಜೀನಾಮೆ ಸಾಧ್ಯತೆ : ಅಧ್ಯಕ್ಷ ಸ್ಥಾನದ ಮೇಲೆ ಸತೀಶ್ ಜಾರಕಿಹೊಳಿ ಕಣ್ಣು!

BREAKING: ಕಾಂಗ್ರೆಸ್‌ನಲ್ಲಿ ಡಿಕೆಶಿ ಬಿಗ್ ಸರ್ಜರಿ: ನಿಕೇತ್ ರಾಜ್, ಭಾವನಾ ರಾಮಣ್ಣ ಸೇರಿ ಹಲವು ಕೆಪಿಸಿಸಿ ಪದಾಧಿಕಾರಿಗಳು ಹುದ್ದೆಯಿಂದ ವಜಾ!

State News
KARNATAKA

KPCC ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ ರಾಜೀನಾಮೆ ಸಾಧ್ಯತೆ : ಅಧ್ಯಕ್ಷ ಸ್ಥಾನದ ಮೇಲೆ ಸತೀಶ್ ಜಾರಕಿಹೊಳಿ ಕಣ್ಣು!

By ಸುರೇಶ್‌ KARNATAKA 1 Min Read

ಬೆಂಗಳೂರು : ಅಂದುಕೊಂಡಂತೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಬಹುತೇಕ…

BREAKING: ಕಾಂಗ್ರೆಸ್‌ನಲ್ಲಿ ಡಿಕೆಶಿ ಬಿಗ್ ಸರ್ಜರಿ: ನಿಕೇತ್ ರಾಜ್, ಭಾವನಾ ರಾಮಣ್ಣ ಸೇರಿ ಹಲವು ಕೆಪಿಸಿಸಿ ಪದಾಧಿಕಾರಿಗಳು ಹುದ್ದೆಯಿಂದ ವಜಾ!

BIG NEWS: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ 13,000 ಜನರಿಗೆ ಕೋಟ್ಯಂತರ ವಂಚನೆ: ತಮಿಳುನಾಡು ಮೂಲದ ಕಿಂಗ್‌ಪಿನ್ ದಾವಣಗೆರೆಯಲ್ಲಿ ಅರೆಸ್ಟ್

BREAKING : ನಾಳೆ ಬೆಳಿಗ್ಗೆ 10:30ಕ್ಕೆ ಸಿಎಂ ರಾಜೀನಾಮೆ : ಟ್ವೀಟ್ ನಲ್ಲಿ ರಾಜ್ಯದ ಜನತೆಗೆ ವಿದಾಯ ಸಂದೇಶ ತಿಳಿಸಿದ ಸಿದ್ದರಾಮಯ್ಯ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.