ಚಿತ್ರದುರ್ಗ : ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಕಾಲ್ತುಳಿತ ದುರಂತ ಸಂಭವಿಸಿತು. ಈ ಒಂದು ಕಾಲ್ತುಳಿತದಲ್ಲಿ ಬೆಳಗಾವಿ ಮೂಲದ ನಾಲ್ವರು ಸಾವನ್ನಪ್ಪಿದ್ದರು ಇದೀಗ ಚಿತ್ರದುರ್ಗ ಜಿಲ್ಲೆಯ ನಾಗಾಸಾಧು ಒಬ್ಬರು ಈ ಒಂದು ಕಾಲ್ತುಳಿತದಲ್ಲಿ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.
ಹೌದು ಕಾಲ್ತುಳಿತದಿಂದ ನಾಗ ಸಾಧು ರಾಜನಾಥ್ ಮಹಾರಾಜ್ (49) ಎನ್ನುವವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇವರು ಚಿತ್ರದುರ್ಗದ ಬಂಡಾರ ಗುರುಪೀಠದ ನಿಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ. ಕಳೆದ 7 ವರ್ಷಗಳಿಂದ ಬಂಜಾರ ಗುರು ಪೀಠದಲ್ಲಿ ಈ ಒಂದು ನಾಗಸಾಧು ನೆಲ್ಲಿಸಿದ್ದರು.15 ದಿನದ ಕುಂಭಮೇಳಕ್ಕೆ ರಾಜನಾಥ ಮಹಾರಾಜ್ ತೆರಳಿದ್ದರು. ಆದರೆ ಕಾಲ್ತುಳಿತದಲ್ಲಿ ಅವರು ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.
ಇನ್ನು ಚಿತ್ರದುರ್ಗಕ್ಕೆ ನಾಗಸಾಧು ಪಾರ್ಥಿವ ಶರೀರ ತರಿಸಲು ಮನವಿ ಮಾಡಿಕೊಳ್ಳಲಾಗಿದ್ದು, ಚಿತ್ರದುರ್ಗದಲ್ಲಿ ಸರ್ದಾರ್ ಸೇವಾಲಾಲ್ ಸ್ವಾಮೀಜಿ ನಾಗಸಾಧು ರಾಜನಾಥ್ ಪಾರ್ಥಿವ ಶರೀರ ತರಿಸಲು ಮನವಿ ಮಾಡಿಕೊಂಡಿದ್ದಾರೆ.ಚಿತ್ರದುರ್ಗದ ಲಂಬಾಣಿ ಸೇವಾಲಾಲ್ ಗುರುಪೀಠದ ಪೀಠಾಧಿಪತಿಯಾಗಿರುವ ಅವರಿಗೆ ಪಾರ್ಥಿವ ಶರೀರ ತರಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ರಾಜನಾಥ ಸಾವು ಅಂದರೆ ನಮಗೆ ನಂಬಲು ಆಗುತ್ತಿಲ್ಲ ಎಂದು ತಿಳಿಸಿದರು.