ಬೆಂಗಳೂರು : ಕಾಂತಾರ ಚಾಪ್ಟರ್ ಒನ್ ರಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿರುವ ರುಕ್ಮಿಣಿ ವಸಂತವರಿಗೆ ಸೈಬರ್ ಕಳ್ಳರು ಕಾಟ ನೀಡಿದ್ದಾರೆ ರುಕ್ಮಿಣಿ ವಸಂತ ಹೆಸರಿನಲ್ಲಿ ಸೈಬರ್ ವಂಚಕರು ಹಣ ಪಡೆದು ವಂಚನೆ ಎಸೆಗಿರುವ ಘಟನೆ ಬೆಳಕಿಗೆ ಬಂದಿದೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ರುಕ್ಮಿಣಿ ವಸಂತ ಅವರು ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಹೌದು ಈ ವಿಚಾರವನ್ನ ಸ್ವತಃ ನಟಿ ರುಕ್ಕಿಣಿ ವಸಂತ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಅನಾಮಿಕ ವ್ಯಕ್ತಿಯೊಬ್ಬ ನನ್ನ ಹೆಸರಿನಲ್ಲಿ ಪೋನ್ ಮಾಡಿ ಜನರಿಂದ ಹಣ ಕೇಳುತ್ತಿದ್ದಾನೆ. ನನಗೂ ಅದಕ್ಕೂ ಸಂಬಂಧ ಇಲ್ಲ. ಯಾರೂ ಆ ವಯಕ್ತಿಯನ್ನ ನಂಬಿ ಹಣ ಕಳಿಸಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ಟ್ವಿಟ್ ನಲ್ಲಿ ಏನಿದೆ?
ಇಂದು ಮಧ್ಯಾಹ್ನ ಈ ಬಗ್ಗೆ ನಟಿ ಟ್ವಿಟ್ ಮಾಡಿದ್ದು, ಅದರಲ್ಲಿ 9445893273 ಸಂಖ್ಯೆಯಿಂದ ವ್ಯಕ್ತಿಯೊಬ್ಬ ಜನರಿಗೆ ಕರೆ ಮಾಡುತ್ತಿದ್ದಾನೆ. ಈ ನಂಬರ್ ಬಳಸುವ ಒಬ್ಬ ವ್ಯಕ್ತಿಯು ನನ್ನ ರೀತಿ ನಟನೆ ಮಾಡಿ, ಅನೇಕ ಜನರಿಗೆ ಕಾಲ್ ಮಾಡುತ್ತಿದ್ದಾನೆ. ಆ ಫೋನ್ ನಂಬರ್ ನನ್ನದಲ್ಲ. ಅದರಿಂದ ಬರುವ ಮೆಸೇಜ್ ಹಾಗೂ ಫೋಮನ್ ಕರೆಗಳನ್ನ ನಂಬಬೇಡ. ದಯವಿಟ್ಟು ಆ ನಂಬರ್‌ನಿಂದ ಬರುವ ಯಾವುದೇ ಮೆಸೇಜ್‌ಗಳಿಗೂ ಪ್ರತಿಕ್ರಿಯಿಸಬೇಡಿ ಅಥವಾ ಅವರ ಮಅತಿಗೆ ಬೆಲೆ ಕೊಡಬೇಡಿ.
ಈ ರೀತಿ ವಂಚನೆ ಮಾಡುವುದು ಸೈಬರ್ ಅಪರಾಧದ ಅಡಿಯಲ್ಲಿ ಬರುತ್ತದೆ. ಈ ರೀತಿ ಮಾಡುವ ಮೂಲಕ ಜನರ ದಾರಿ ತಪ್ಪಿಸಲು ಪ್ರಯತ್ನ ಮಾಡಲಾಗುತ್ತಿದೆ. ಇದರಲ್ಲಿ ಭಾಗಿ ಆಗಿರುವವರ ವಿರುದ್ಧ ಕಾನೂನು ರೀತಿಯಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ವಿಚಾರವಾಗಿ ಮಾಹಿತಿ ಬೇಕಿದ್ದರೂ ನನ್ನನ್ನ ನೇರವಾಗಿ ಸಂಪರ್ಕ ಮಾಡಬಹುದು ಅಥವಾ ನನ್ನ ಟೀಮ ಸಹ ಸಂಪರ್ಕ ಮಾಡಬಹುದು ಎಂದು ಬರೆದುಕೊಂಡಿದ್ದಾರೆ.
🚨 Important Alert & Awareness Message 🚨
It has come to my attention that an individual using the number 9445893273 is impersonating me and reaching out to various people under false pretenses.
I want to clarify that this number does not belong to me, and any messages or calls…
— rukmini (@rukminitweets) November 7, 2025








