ಬೆಂಗಳೂರು : ಬಹು ನಿರೀಕ್ಷಿತ ರಿಷಬ್ ಶೆಟ್ಟಿ ನಟನೆಯ ಕಾಂತಾರ-1 ಚಲನಚಿತ್ರವು ಅಕ್ಟೋಬರ್ 2 ರಂದು ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಈ ಕುರಿತು ಹೊಂಬಾಳೆ ಫಿಲಂಸ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಕ್ಟೋಬರ್ 2ರಂದು ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ಕಾಂತಾರ ಚಾಪ್ಟರ್-1 ಸಿನಿಮಾ ರಿಲೀಸ್ ಆಗಲಿದೆ ಎಂದು ಅನೌನ್ಸ್ ಮಾಡಿದೆ. ಚಲನಚಿತ್ರದ ಪೋಸ್ಟರ್ ಕೂಡ ಚಿತ್ರತಂಡ ರಿಲೀಸ್ ಮಾಡಿದೆ.
ಹೌದು ಅಕ್ಟೋಬರ್ 2ರಂದು ಕಾಂತರಾ-1ಚಲನಚಿತ್ರ ರಿಲೀಸ್ ಆಗಲಿದೆ. ಪ್ಯಾನ್ ಇಂಡಿಯಾ ಭಾಷೆಗಳಲ್ಲಿದೆ ರಿಷಬ್ ಶೆಟ್ಟಿ ಹುಟ್ಟು ಹಬ್ಬಕ್ಕೆ ಕಾಂತಾರ ಚಿತ್ರ ತಂಡ ಇದೀಗ ಉಡುಗೊರೆ ನೀಡುತ್ತಿದ್ದೂ, ಇಂದು ಕಾಂತಾರ-1 ಪೋಸ್ಟರ್ ರಿಲೀಸ್ ಮಾಡಿದೆ. ಹಿಂದೆ ಅನೌನ್ಸ್ ಮಾಡಿರೋ ದಿನಾಂಕದಂದು ಸಿನಿಮಾವನ್ನು ರಿಲೀಸ್ ಮಾಡಲಿದ್ದು, ಒಟ್ಟು 7 ಭಾಷೆಗಳಲ್ಲಿ ಕಾಂತಾರ-1 ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಇಂಗ್ಲಿಷ್ ಮತ್ತು ಬೆಂಗಾಲಿ ಭಾಷೆಗಳಲ್ಲಿ ಕಾಂತಾರ-1 ರಿಲೀಸ್ ಆಗಲಿದೆ.
ಕಾಂತಾರ ಚಾಪ್ಟರ್ 1 ಚಲನಚಿತ್ರ ಶೂಟಿಂಗ್ ಆರಂಭವಾದಾಗಿನಿಂದಲೂ ಈ ಒಂದು ಚಿತ್ರತಂಡಕ್ಕೆ ಹಲವಾರು ವಿಜ್ಞಗಳು ಎದುರಾಗಿದ್ದವು. ಅಲ್ಲದೆ ಇತ್ತೀಚಿಗೆ ಕಾಂತಾರಾ ಚಿತ್ರದಲ್ಲಿ ನಟಿಸಿದ್ದ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅಲ್ಲದೆ ಚಿತ್ರತಂಡದ ಹಲವು ಕಲಾವಿದರು ಹೃದಯಾಘಾತದಿಂದ ಬಲಿಯಾಗಿದ್ದು ಹಲವು ಅವಘಡಗಳು ಕೂಡ ನಡೆದಿದೆ. ಶ್ರೀಗ ಶಿವಶೆಟ್ಟಿ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅಲದೇ ಗಾಂಧೀ ಜಯಂತಿ ಇರುವ ಹಿನ್ನೆಲೆ ಕೂಡ ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ತಿಳಿದು ಬಂದಿದೆ.