ಕಲಬುರ್ಗಿ : ಕಲ್ಬುರ್ಗಿಯಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ತಾಯೊಬ್ಬಳು ತನ್ನ ಮಗುವನ್ನು ಶಾಲಾ ಬಸ್ ಹತ್ತಿಸುವ ಸಂದರ್ಭದಲ್ಲಿ ವಿದ್ಯುತ್ ತಂತಿ ತುಳಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರ್ಗಿ ನಗರದ ಮೋಹನ್ ಲಾಡ್ಜ್ ಎದುರುಗಡೆ ನಡೆದಿದೆ.
ಹೌದು ಶಾಲಾ ಬಸ್ ಹತ್ತಿಸುತ್ತಿರುವಾಗಲೇ ತಾಯಿ ವಿದ್ಯುತ್ ತಂತಿ ತುಳಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ವಿದ್ಯುತ್ ಶಾಕ್ ನಿಂದ ಗಂಭೀರವಾಗಿ ಭಾಗ್ಯಶ್ರೀ ಗಾಯಗೊಂಡಿದ್ದಾರೆ. ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರೂ ಕೂಡ ಘೋರ ದುರಂತ ಒಂದು ನಡೆದು ಹೋಗುತ್ತಿತ್ತು. ಅಕಸ್ಮಾತ್ ಬಸ್ ಗೆ ವಿದ್ಯುತ್ ತಾಗಿದ್ದರೆ, ಭಾರಿ ಅನಾಹುತ ನಡೆಯುತ್ತಿತ್ತು.
ಶಾಲಾ ಬಸ್ ನಲ್ಲಿ ಹತ್ತಾರು ಬುದ್ಧಿಮಾಂದ್ಯ ಮಕ್ಕಳು ಇದ್ದರು. ತನ್ನ ಮಗುವನ್ನು ಶಾಲಾ ಬಸ್ ಗೆ ಹತ್ತಿಸಲು ಭಾಗ್ಯಶ್ರೀ ಬಂದಿದ್ದಾರೆ. ಮಗುವನ್ನು ಶಾಲೆಗೆ ಬಿಡಲು ಬಂದಿದ್ದ ತಾಯಿ ಭಾಗ್ಯಶ್ರೀ ವಿದ್ಯುತ್ ತಂತಿ ತುಳಿದಿದ್ದಾಳೆ. ಕೂಡಲೇ ಭಾಗ್ಯಶ್ರೀ ಮಗುವನ್ನು ಎತ್ತಿ ಪಕ್ಕಕ್ಕೆ ಎಸೆದಿದ್ದು ತಾನು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕೂಡಲೇ ಸ್ಥಳೀಯರು ಬಡಿಗೆಯಿಂದ ಅವಳನ್ನು ಬಿಡಿಸಿದ್ದಾರೆ. ಭಾಗ್ಯಶ್ರೀ ರಸ್ತೆಯಲ್ಲಿ ನರಳಾಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜೆಸ್ಕಾಂ ಹಾಗೂ ಪಾಲಿಕೆ ವಿರುದ್ಧ ಇದೀಗ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.