ಕಲಬುರ್ಗಿ : ಕಲ್ಬುರ್ಗಿ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಕಲ್ಬುರ್ಗಿ ಸುತ್ತಮುತ್ತಲಿನ ನದಿಗಳು ಸಹ ಭಾರಿ ಪ್ರಮಾಣದಲ್ಲಿ ತುಂಬಿ ಹರಿಯುತ್ತಿವೆ ಇದೀಗ ಕಲ್ಬುರ್ಗಿ ಜಿಲ್ಲೆಯಲ್ಲಿ ಕಾಗಿನಾ ನದಿ ತುಂಬಿ ಹರಿಯುತ್ತಿದ್ದರಿಂದ ಜಿಲ್ಲೆಯ ಮಳಕೇಡದಉತ್ತರಾದಿ ಮಠದಲ್ಲಿರುವ ಜಯತೀರ್ಥರ ಮೂಲ ಬೃಂದಾವನ ಸಂಪೂರ್ಣವಾಗಿ ಜಲಾವೃತವಾಗಿದೆ.
ಹೌದು ಕಲ್ಬುರ್ಗಿಯಲ್ಲಿ ಭಾರಿ ಪ್ರವಾಹಕ್ಕೆ ಮಳಖೇಡದ ಉತ್ತರಾದಿ ಮಠದ ಜಯತೀರ್ಥರ ಮೂಲ ಬೃಂದಾವನ ಜಲಾವೃತವಾಗಿದೆ. ಕಾಗಿನಾ ನದಿ ತಡದಲ್ಲಿರುವ ಈ ಒಂದು ಉತ್ತರಾದಿ ಮಠಕ್ಕೆ ಮಠದ ಆವರಣದಲ್ಲಿ ಸಂಪೂರ್ಣವಾಗಿ ನದೀ ನೀರು ತುಂಬಿ ಹರಿಯುತ್ತಿದೆ ಈ ಹಿನ್ನಲೆಯಲ್ಲಿ ಭಕ್ತರಿಗೆ ಪ್ರವೇಶ ನಿರ್ಭಂಧಿಸಲಾಗಿದೆ.