ನವದೆಹಲಿ: ಗುಜರಾತ್ನಿಂದ ಭಾರತೀಯ ಜನತಾ ಪಕ್ಷದ (BJP) ಎಲ್ಲಾ ನಾಲ್ವರು ಅಭ್ಯರ್ಥಿಗಳು ಇಂದು (ಫೆಬ್ರವರಿ 20) ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿಯ ನಾಲ್ವರು ಅಭ್ಯರ್ಥಿಗಳಲ್ಲಿ ಧೋಲಾಕಿಯಾ ಅತ್ಯಂತ ಶ್ರೀಮಂತ.!
ಗುಜರಾತ್ನಿಂದ ರಾಜ್ಯಸಭಾ ಚುನಾವಣೆಗೆ ಗುರುವಾರ (ಫೆಬ್ರವರಿ 15) ನಾಮಪತ್ರ ಸಲ್ಲಿಸಿದ ನಾಲ್ವರು ಬಿಜೆಪಿ ಅಭ್ಯರ್ಥಿಗಳಲ್ಲಿ ವಜ್ರದ ದೊರೆ ಗೋವಿಂದ್ ಧೋಲಾಕಿಯಾ ಒಟ್ಟು 279 ಕೋಟಿ ರೂ.ಗಳ ಘೋಷಿತ ಸಂಪತ್ತಿನೊಂದಿಗೆ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು 9.36 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ನಡ್ಡಾ ಮತ್ತು ಧೋಲಾಕಿಯಾ ಅವರಲ್ಲದೆ, ಫೆಬ್ರವರಿ 27 ರಂದು ನಡೆಯಲಿರುವ ಚುನಾವಣೆಗೆ ಆಡಳಿತ ಪಕ್ಷವು ಪಕ್ಷದ ಮುಖಂಡರಾದ ಜಸ್ವಂತ್ ಸಿಂಗ್ ಪರ್ಮಾರ್ ಮತ್ತು ಮಯಾಂಕ್ ನಾಯಕ್ ಅವರನ್ನ ಕಣಕ್ಕಿಳಿಸಿದೆ.
ನಾಲ್ವರು ಅಭ್ಯರ್ಥಿಗಳಲ್ಲಿ ಯಾರ ವಿರುದ್ಧವೂ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಅಥವಾ ಅವರು ಯಾವುದೇ ಕ್ರಿಮಿನಲ್ ವಿಚಾರಣೆಯನ್ನು ಎದುರಿಸುತ್ತಿಲ್ಲ ಎಂದು ಅಫಿಡವಿಟ್ನಲ್ಲಿ ಘೋಷಿಸಲಾಗಿದೆ. ಚುನಾವಣಾ ಅಫಿಡವಿಟ್ಗೆ ಲಗತ್ತಿಸಲಾದ 2022-23ರ ಆದಾಯ ತೆರಿಗೆ ರಿಟರ್ನ್ ಪ್ರಕಾರ, ನಡ್ಡಾ ಅವರ ವಾರ್ಷಿಕ ಆದಾಯ 24.92 ಲಕ್ಷ ರೂ., ಅವರ ಪತ್ನಿ ಮಲ್ಲಿಕಾ ಅವರ ಆದಾಯ ಇದೇ ಅವಧಿಯಲ್ಲಿ 5.26 ಲಕ್ಷ ರೂ. ಒಟ್ಟಾರೆಯಾಗಿ, ದಂಪತಿಗಳು 9.36 ಕೋಟಿ ರೂ.ಗಳ ಆಸ್ತಿಯನ್ನ ಹೊಂದಿದ್ದಾರೆ ಎಂದು ಅಫಿಡವಿಟ್’ನಲ್ಲಿ ತಿಳಿಸಲಾಗಿದೆ.
ಟೀಂ ಇಂಡಿಯಾಗೆ ಬಿಗ್ ಶಾಕ್ : ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯಕ್ಕೆ ‘ಜಸ್ಪ್ರೀತ್ ಬುಮ್ರಾ’ ಅಲಭ್ಯ
ಕಾಶ್ಮೀರ ಕಣಿವೆಯಲ್ಲಿ ‘ಎಲೆಕ್ಟ್ರಿಕ್ ರೈಲು’ ಆರಂಭಿಸಿದ ‘ಪ್ರಧಾನಿ ಮೋದಿ’ ಶ್ಲಾಘಿಸಿದ ‘ಫಾರೂಕ್ ಅಬ್ದುಲ್ಲಾ’