ಚಿಕ್ಕಬಳ್ಳಾಪುರ : ತಮ್ಮ ಮಗಳ ನಾಮಕರಣ ಸಿದ್ಧತೆಯಲ್ಲಿದ್ದಂತಹ ಪತ್ರಕರ್ತರೊಬ್ಬರು ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ದೇವಾಲಯಕ್ಕೆ ಡಿಕ್ಕಿಯಾಗಿ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಮಾಚಹಳ್ಳಿ ಕೆರೆ ಏರಿಯ ಮೇಲೆ ಈ ಒಂದು ದುರ್ಘಟನೆ ಸಂಭವಿಸಿದೆ.
ಮೃತರನ್ನು ಗುಂಡಿಬಂಡೆ ಮೂಲದ ಭರತ್ (32) ಎಂದು ತಿಳಿದುಬಂದಿದ್ದು, ವೇಗವಾಗಿ ಬಂದು ದೇವಾಲಯಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಭರತ್ ಮೃತಪಟ್ಟಿದ್ದು, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಗುಡಿಬಂಡೆ ಪಟ್ಟಣದಿಂದ ಬಾಗೇಪಲ್ಲಿಗೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ದೇವಾಲಯಕ್ಕೆ ಡಿಕ್ಕಿ ಹೊಡೆದಿದೆ. ಭರತ್ ತಮ್ಮ ಮಗಳ ನಾಮಕರಣ ಸಿದ್ಧತೆಯಲ್ಲಿರುವಾಗಲೇ ಈ ಒಂದು ದುರಂತ ಸಂಭವಿಸಿದ್ದು, ಕುಟುಂಬಸ್ಥರ ಆಕ್ರಂದನ ಇದೀಗ ಮುಗಿಲು ಮುಟ್ಟಿದೆ.