ತುಮಕೂರು : ತುಮಕೂರಿನಲ್ಲಿ ಬೆಚ್ಚಿ ಬೆಳೆಸುವ ಘಟನೆ ನಡೆದಿದ್ದು, ಜುವೆಲ್ಲರೀ ಶಾಪ್ ಮಾಲೀಕನೊಬ್ಬ ಸುಮಾರು 100ಕ್ಕೂ ಹೆಚ್ಚು ಜನರ ಬಳಿ ಹಣ ಪಡೆದು 30 ಕೋಟಿಯೊಂದಿಗೆ ಕುಟುಂಬ ಸಮೇತ ಪರಾರಿಯಾಗಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಹೌದು ತುಮಕೂರಿನ ಜುವೆಲ್ಲರೀ ಶಾಪ್ ಮಾಲೀಕನ ಈ ಒಂದು ಮಹಾ ಮೋಸ ಬೆಳಕಿಗೆ ಬಂದಿದೆ. 30 ಕೋಟಿ ಹಣ ಪಡೆದು ಕುಟುಂಬ ಸಮೇತ ಇದೀಗ ಜುವೆಲ್ಲರಿ ಮಾಲೀಕ ಪರಾರಿಯಾಗಿದ್ದಾನೆ. ಸುಮಾರು 100ಕ್ಕೂ ಹೆಚ್ಚು ಮಂದಿಗೆ ಶಿವಾನಂದ ಮೂರ್ತಿ ಎನ್ನುವ ವ್ಯಕ್ತಿ ವಂಚಿಸಿದ್ದಾನೆ. ವಂಚನೆ ಎಸಗಿದವನನ್ನು ಆಕಾಶ ಜುವೆನರಿ ಶಾಪ್ ಮಾಲೀಕ ಶಿವಾನಂದಮೂರ್ತಿ ಎಂದು ತಿಳಿದುಬಂದಿದೆ.
ತುಮಕೂರಿನ ಸರ್ಕಾರಿ ಬಸ್ ನಿಲ್ದಾಣದ ಎದುರುಗಡೆ ಜಿಎಂಎಸ್ ಕಾಂಪ್ಲೇಂಕ್ಸ್ ನಲ್ಲಿ ಜುವೆಲ್ಲರೀ ಶಾಪ್ ಹೊಂದಿದ್ದ ಶಿವಾನಂದಮೂರ್ತಿ, ಚೀಟಿ ವ್ಯವಹಾರವನ್ನು ಕೂಡ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಆಕಾಶ ಸಹಾಕಾರಿ ಕೋ ಆಪರೇಟಿವ್ ಸೊಸೈಟಿ ಆರಂಭ ಮಾಡಿದ್ದ. ನೂರಾರು ಜನರ ಶೇರ್ ಹಣ ಸಂಗ್ರಹಿಸಿದ ಶಿವಾನಂದ ಮೂರ್ತಿ ಸೊಸೈಟಿ ಹಣ ಹೊಡೆದುಕೊಂಡು ಇದೀಗ ಪರಾರಿಯಾಗಿದ್ದಾನೆ. ಸದ್ಯ ಶಿವಾನಂದ ಮೂರ್ತಿ ವಿರುದ್ಧ ಆಡಳಿತ ಮಂಡಳಿ ದೂರು ನೀಡಿದ್ದು, ಶಿವನಂದ ಮೂರ್ತಿ ವಿರುದ್ಧ FIR ದಾಖಲಾಗಿದೆ. ಯಾರು ಹಣ ನೀಡದಂತೆ ಸೊಸೈಟಿ ನಿರ್ದೇಶಕ ಮನವಿ ಮಾಡಿದ್ದಾರೆ.