ಕಲಬುರಗಿ : ಇಂದು ಬೆಂಗಳೂರಿನಲ್ಲಿ ಪಲ್ಲಕ್ಕಿ ಹೊತ್ತಿದ್ದ ಟ್ರಾಕ್ಟರ್ ಗೆ ವಿದ್ಯುತ್ ಪ್ರವಹಿಸಿ ಇಬ್ಬರು ದಾರುಣವಾಗಿ ಸಾವನ್ನುಪ್ಪಿರುವ ಘಟನೆ ನಡೆದ ಬೆನ್ನೆಲೆ, ಇದೀಗ ಯಾದಗಿರಿಯಲ್ಲಿ ಮತ್ತೊಂದು ಘಟನೆ ನಡೆದಿದ್ದು, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಇದೀಗ ಝಸ್ಕಾಂ ಹೊರಗುತ್ತಿಗೆ ನೌಕರರ ಒಬ್ಬ ವಿದ್ಯುತ್ ಪ್ರವಹಿಸಿ ಸಾವನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ನಡೆದಿದೆ.
ಹೌದು ಕೆಂಭಾವಿ ಪಟ್ಟಣದಲ್ಲಿ ಮಳೆಯಿಂದ ಮರ ಮುರಿದುಕೊಂಡು ಕಂಬದ ಮೇಲೆ ಬಿದ್ದಿರುವುದರಿಂದ ಅದನ್ನು ದುರಸ್ಥಿ ಮಾಡುವ ವೇಳೆ ನಾಗಪ್ಪ ಕುಂಬಾರ (35) ವಿದ್ಯುತ್ ಪ್ರವಹಿಸಿ ದಾರುಣವಾಗಿ ಸಾವನ್ನಪ್ಪಿದ್ದಾನೆ. ಘಟನೆ ಕುರಿತಂತೆ ಇದೀಗ ಕೆಂಭಾವಿ ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.