ಬೆಂಗಳೂರು : ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಸದ್ಯ ಬಿಜೆಪಿ ಜೆಡಿಎಸ್ ಗೆ ಮೂರು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದು ಹಾಸನ ಕೋಲಾರ ಹಾಗೂ ಮಂಡ್ಯ ಕ್ಷೇತ್ರಗಳಲ್ಲಿ ಈ ಬಾರಿ ಜೆಡಿಎಸ್ ಸ್ಪರ್ಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಸ್ವಾಮಿ ಘೋಷಣೆ ಮಾಡಿದ್ದಾರೆ.
ಇಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಂತ್ರವಾಗಿ ಸ್ಪರ್ಧಿಸಿದರು ಹಾಸನ ಮಂಡ್ಯದಲ್ಲಿ ಸುಲಭವಾಗಿ ನಾವು ಜಯಿಸುತ್ತೇವೆ. ಹಾಸನ ಮಂಡ್ಯ ಕೋಲಾರದಲ್ಲಿ ಜೆಡಿಎಸ್ ಸ್ಪರ್ಧಿಸಲು ಯಾವುದೇ ಗೊಂದಲ ಇಲ್ಲ.18 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಭಲ್ಯವಿದೆ.ಆ ಪ್ರಾಬಲ್ಯ ಬಳಸಿಕೊಳ್ಳಲು ಬಿಜೆಪಿಗೆ ಹೇಳುತ್ತೇನೆ. ಎರಡು ಕ್ಷೇತ್ರಕ್ಕೆ ನಾನು ಇಷ್ಟೆಲ್ಲಾ ಮಾಹಿತಿ ಮಾಡಿಕೊಳ್ಳಬೇಕಿತ್ತಾ? ಎಂದರು.
ಬಿಜೆಪಿ ಆರಂಭದಲ್ಲಿ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆ.ಚುನಾವಣಾ ಸಭೆ ಹಾಗೂ ಪ್ರಚಾರ ನಮ್ಮನ್ನ ಬಿಟ್ಟು ಮಾಡುತ್ತಿದೆ ಯಾವ ಸಭೆಗೂ ನಮ್ಮನ್ನು ಬಿಜೆಪಿಯವರು ಕರೆಯುತ್ತಿಲ್ಲ ನಮ್ಮ ಪಕ್ಷ ಒತ್ತೆಯಿಟ್ಟು ಮೈತ್ರಿ ಮಾಡಿಕೊಳ್ಳುವ ಅಗತ್ಯ ನಮಗೆ ಇಲ್ಲ ಎಂದು ಕೋ, ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಇದರಲ್ಲಿ ಹಲವು ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.