ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ನಿನ್ನೆ ತಡರಾತ್ರಿ ಭೀಕರವಾದಂತಹ ಕೊಲೆಯಾಗಿದ್ದು, ಜೆಡಿಎಸ್ ಮುಖಂಡನನ್ನು ದುಷ್ಕರ್ಮಿಗಳು ಲಾಂಗು ಮತ್ತು ಮಚ್ಚುಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ತಮ್ಮನಾಯಕನಹಳ್ಳಿ ಗೇಟ್ ಬಳಿ ನಡೆದಿದೆ.
ಕೊಲೆಯಾದ ಜೆಡಿಎಸ್ ಮುಖಂಡನನ್ನು ವೆಂಕಟೇಶ್ (50) ಹತ್ಯೆಗೀಡಾದ ದುರ್ದೈವಿ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ವೆಂಕಟೇಶ್ ತಮ್ಮ ಸ್ವಗ್ರಾಮ ತಮ್ಮನಾಯಕನಹಳ್ಳಿಯಿಂದ ಬೈಕ್ ನಲ್ಲಿ ಗೇಟ್ ಬಳಿಗೆ ಬಂದು ಮೆಡಿಕಲ್ ನಲ್ಲಿ ಔಷಧಿ ತೆಗೆದುಕೊಂಡು ಸ್ವಗ್ರಾಮಕ್ಕೆ ತೆರಳುತ್ತಿದ್ದರು.
ಈ ವೇಳೆ ಸುಮಾರು ನಾಲ್ಕೈದು ದುಷ್ಕರ್ಮಿಗಳು ಅವರ ಬೈಕ್ ಗೆ ಅಡ್ಡ ಹಾಕಿ ಅವರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಮಚ್ಚು, ಲಾಂಗ್‌ಗಳಿಂದ ಕೊಚ್ಚಿ ಭೀಕರ ಕೊಲೆ ಮಾಡಿದ್ದಾರೆ. ಯಾರು ಹಾಗೂ ಯಾವ ಕಾರಣಕ್ಕಾಗಿ ವೆಂಕಟೇಶ್ ಅವರ ಕೊಲೆಯಾಗಿದೆ ಎಂಬುದು ತನಿಖೆ ಬಳಿಕ ಅಷ್ಟೇ ಗೊತ್ತಾಗಲಿದೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ.