ನವದೆಹಲಿ : ದೆಹಲಿಯ ಕೆಂಪು ಕೋಟೆಯ ಬಳಿ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಷ್ ಉಗ್ರ ಮುಜಾಮಿಲ್ ದೆಹಲಿ ನಂಟು ಬಯಲಾಗಿದ್ದು, ಮುಜಾಮಿಲ್ ಮೊಬೈಲ್ ನಿಂದ ಸ್ಫೋಟಕ ಮಾಹಿತಿ ಬಯಲಾಗಿದೆ. ಜೈ ಮೊಹಮ್ಮದ್ ಮಾಡೈಲಾಗ್ ಭಯೋತ್ಪಾದಕ ಮುಜಾಮಿಲ್ ನ ಮೊಬೈಲ್ ನಿಂದ ತನಿಖಾ ಸಂಸ್ಥೆಗಳಿಗೆ ಆಘಾತಕಾರಿ ರಹಸ್ಯ ಬಯಲಾಗಿದೆ.
ರಾಜಧಾನಿ ದೆಹಲಿಯಲ್ಲಿ ದುಷ್ಕೃತ್ಯಕ್ಕೆ ಮುಜಮಿಲ್ ಸಂಚು ರೂಪಿಸಿದ್ದ. ಈ ವರ್ಷ ಹಲವು ಬಾರಿ ಆತ ದೆಹಲಿಗೆ ಭೇಟಿ ನೀಡಿದ್ದ. ಮುಜಾಮಿಲ್ ಮೊಬೈಲ್ ನಲ್ಲಿ ಕೆಲವು ಸೂಕ್ಷ್ಮ ಸ್ಥಳಗಳ ಚಿತ್ರಗಳು ಪತ್ತೆಯಾಗಿವೆ. ಮುಜಾಮಿಲ್ ಭೇಟಿ ಷಡ್ಯಂತರದ ಭಾಗ ಎಂದು ಏಜೆನ್ಸಿಗಳು ನಂಬಿವೆ.
ದೆಹಲಿಯಲ್ಲಿ ಮುಜಾಮಿಲ್ ಯಾರನ್ನು ಬೇಟೆಯಾಗಿದ್ದ ಮತ್ತು ಆತನ ಸಂಪರ್ಕದಲ್ಲಿದ್ದವರು ಯಾರು ಎಂಬುದರ ಕುರಿತು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಮುಜಾಮಿಲ್ ಒಂಟಿಯಾಗಿ ದೆಹಲಿಗೆ ಬಂದಿದ್ದನಾ ಅಥವಾ ಪಿತೂರಿಯಲ್ಲಿ ಬೇರೆ ಯಾರಾದರೂ ಇದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.








